














ಸಂಪಾಜೆ ಗ್ರಾಮದ ಶ್ರೀ ಶಿರಾಡಿ ಗೂನಡ್ಕ ಬೈಲೆ ರಾಜನ್ ದೈವಸ್ಥಾನದಲ್ಲಿ ಪತ್ತನಾಜೆ ನೇಮೋತ್ಸವವು ಮೇ 25 ಕೂಡಿ 26 ರಂದು ನಡೆಯಿತು, ಮೇ ೧೭ರಂದು ಗೊನೆ ಕಡಿಯಲಾಯಿತು. ಮೇ. ೨೪ರಂದು ಶಿರಾಡಿ ದೈವದ ನೇಮ ನಡೆಯಿತು.

ಈ ಸಂದರ್ಭದಲ್ಲಿ ಪುನರ್ಪ್ರತಿಷ್ಠಾ ಕಲಶೋತ್ಸವ ಸಮಿತಿ ಅಧ್ಯಕ್ಷ ನವೀನ್ ಕೆ.ಜಿ. ಇರ್ಣೆ ಬೈಲು, ಕಾರ್ಯದರ್ಶಿ ವರದರಾಜ್ ಸಂಕೇಶ, ಖಜಾಂಜಿ ಸನತ್ ಪಿ.ಎಸ್. ಪೆಲ್ತಡ್ಕ, ಆಡಳಿತ ಮಂಡಳಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಕಾರ್ಯದರ್ಶಿ ದಾಮೋದರ ಕೆ., ಖಜಾಂಜಿ ಪ್ರಕಾಶ ಕೆ.ಪಿ., ಆಡಳಿತ ಮೊಕ್ತೇಸರ ಕೆ.ಸಿ. ನಾರಾಯಣ, ಉಪಾಧ್ಯಕ್ಷರು, ಪದಾಧಿಕಾರಿಗಳು, ಊರ ಹಾಗೂ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದು, ದೈವದ ಪ್ರಸಾದ ಸ್ವೀಕರಿಸಿದರು.








