ರಸ್ತೆ ಬದಿಗೆ ಸರಿದ ವಿದ್ಯುತ್ ಕಂಬ















ಶಾಸಕಿ ಭಾಗೀರಥಿ ಮುರುಳ್ಯರವರ ರೂ. ೨೦ ಲಕ್ಷ ಅನುದಾನ, ನ.ಪಂ. ಮಾಜಿ ಸದಸ್ಯೆ ಪ್ರವಿತಾ ಪ್ರಶಾಂತ್ರವರ ೪ ಲಕ್ಷ ರೂ. ಅನುದಾನದಲ್ಲಿ, ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ವೆಂಕಪ್ಪ ಗೌಡರ ಪ್ರಯತ್ನಿದಿಂದ ನಿರ್ಮಾಣಗೊಂಡ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಾಲಯಕ್ಕೆ ಹೋಗುವ ರಸ್ತೆ ಕಾಮಗಾರಿ ಇಂದು ಪೂರ್ಣಗೊಂಡಿದೆ. ಹಲವಾರು ವರ್ಷಗಳಿಂದ ಬದಿಗೆ ಸರಿಸಲು ಪ್ರಯತ್ನದಲ್ಲಿದ್ದ ವಿದ್ಯುತ್ ಕಂಬದ ಕಾಮಗಾರಿಯೂ ಪೂರ್ಣಗೊಂಡಿದೆ.
ಎಂ. ವೆಂಕಪ್ಪ ಗೌಡ, ಕಾಂಟ್ರಾಕ್ಟರ್ ಪ್ರಶಾಂತ್, ಸೂಡಾ ಅಧ್ಯಕ್ಷ ಕೆ.ಎಂ.ಮುಸ್ತಫಾ, ನ.ಪಂ. ಮಾಜಿ ಸದಸ್ಯ ರಾಜು ಪಂಡಿತ್, ಫಲಾನುಭವಿಗಳಾದ ಚಂದ್ರಶೇಖರ ಅಡ್ಪಂಗಾಯ, ಪದ್ಮನಾಭ, ದೇವಿಪ್ರಸಾದ್ ಮಿಥುನ್, ಚೆನ್ನಪ್ಪ ಪೂಜಾರಿ ಕಾಮಗಾರಿ ವೀಕ್ಷಣೆ ಮಾಡಿದರು.
ಮುಂದಿನ ಯೋಜನೆಯಲ್ಲಿ ಅಶ್ವಥ ಕಟ್ಟೆಯ ಎರಡೂ ಬದಿಯ ಇಕ್ಕೆಲಗಳಲ್ಲಿ ವಾಹನಗಳು ಸರಾಗವಾಗಿ ಸಾಗುವಂತೆ ದುರಸ್ತಿ ಒಡಿಸುವ ಯೋಜನೆಯೂ ಇದೆ. ಈ ಹಿಂದೆಯೂ ಕಾಯರ್ತೋಡಿ ದೇವಸ್ಥಾನದ ವ್ಯ. ಸಮಿತಿ ಮಾಜಿ ಅಧ್ಯಕ್ಷ
ನಾರಾಯಣ ಕೇಕಡ್ಕರವರ ಮುತುವರ್ಜಿಯಲ್ಲಿ ದೇವಾಲಯಕ್ಕೆ ೨ ಕಡೆಯಿಂದ ಹೋಗುವ ರಸ್ತೆಯ ದುರಸ್ತಿ ಕಾರ್ಯ ನಡೆದಿತ್ತು.








