













ಪೆಟ್ರೋಲ್ ಬಂಕ್ ಗಳಲ್ಲಿ ಬಾಟಲ್ ಮತ್ತು ಕ್ಯಾನ್ ಗಳಿಗೆ ಪೆಟ್ರೋಲ್ ತುಂಬಿಸಿಕೊಡುವುದಕ್ಕೆ ನಿರ್ಬಂಧ ಹೇರಿರುವುದು ಕೃಷಿಕರಿಗೆ ಮಾಡಿದ ಘೋರ ಅನ್ಯಾಯವಾಗಿದೆ.ಮೊದಲೇ ಕೃಷಿ ಚಟುವಟಿಕೆಗಳಿಗೆ ಕೂಲಿ ಕಾರ್ಮಿಕರ ಅಭಾವದಿಂದ ಕಂಗೆಟ್ಟಿರುವ ಕೃಷಿಕರು ಕಳೆಕೊಚ್ಚುವ ,ಮರ ಕೊಯ್ಯುವ ಮುಂತಾದ ಸಣ್ಣಪುಟ್ಟ ಯಂತ್ರಗಳ ಮೂಲಕ ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದು ,ಇನ್ನು ಕೆಲವರು ಇದನ್ನೇ ಪೂರ್ಣಪ್ರಮಾಣದ ಉದ್ಯೋಗವಾಗಿ ಮಾಡುತ್ತಿದ್ದಾರೆ.
ಆದರೆ ಈಗ ಬಂಕ್ ಗಳಲ್ಲಿ ಅವರ ನಿಯಮವನ್ನು ಮುಂದಿಟ್ಟುಕೊಂಡು ಬಾಟಲ್ ,ಕ್ಯಾನ್ ಗಳಿಗೆ ಪೆಟ್ರೋಲ್ ಕೊಡದೇ ಇರುವುದು ಕೃಷಿಕರಿಗೆ ತೊಂದರೆಯಾಗಿದೆ.ಇಂತಹ ಒಂದು ಅವೈಜ್ಞಾನಿಕ ನಿಯಮ ಮಾಡಿದ ಮತ್ತು ಅದನ್ನು ಪಾಲಿಸುವುದು ಮುಟ್ಟಾಳತನದ ಪರಮಾವಧಿಯಾಗಿದೆ.ಆದುದರಿಂದ ಸರಕಾರಗಳು ಮಧ್ಯಪ್ರವೇಶಿಸಿ ಈ ನಿಯಮ ತೆರವುಗೊಳಿಸಿ ರೈತರಿಗೆ ,ಸ್ವ ಉದ್ಯೋಗಿಗಳಿಗೆ ನೆರವಾಗಬೇಕೆಂದು ಸಂಪಾಜೆ ಪಯಸ್ವಿನಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎನ್.ಸಿ.ಅನಂತರವರು ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹಿಸಿದ್ದಾರೆ.







