













ಸುಳ್ಯ ನಿವಾಸಿ ಪ್ರಸ್ತುತ ಕುಶಾಲನಗರದಲ್ಲಿ ಇಂಜಿನಿಯರ್ ಆಗಿರುವ ಇಮ್ತಿಯಾಜ್ ಪಾಷ ರವರ ತಂದೆ, ಮೆಸ್ಕಾಂ ನ ಬೆಳ್ಳಾರೆ, ಸುಳ್ಯ ಹಾಗೂ ಬೆಸ್ಕಾಂ ನಲ್ಲಿ ಉದ್ಯೋಗಿಯಾಗಿದ್ದ ಶಾಫಿ ಹಾಜಿ ಜೂ.05 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ತಿಂಗಳು ಪವಿತ್ರ ಹಜ್ ಯಾತ್ರೆ ಗೆ ತೆರಳಿದ್ದರು ಯಾತ್ರೆ ಮುಗಿಸಿ ತವರಿಗೆ ಅಗಮಿಸುತ್ತಿದ್ದ ಅವರಿಗೆ ಆರೋಗ್ಯದಲ್ಲಿ ಏರುಪೇರು ಆದ ಕಾರಣ ಏರ್ಪೋರ್ಟ್ ನಿಂದ ನೇರ ಚಿಕಿತ್ಸೆ ಗಾಗಿ ಮಂಗಳೂರು ಕೆಎಂಸಿ ಅಸ್ಪತ್ರೆಗೆ ತೆರಳಿದ್ದರು ಅಲ್ಲಿ ಚಿಕಿತ್ಸೆ ಪಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಜೂ.6 ರಂದು ಬೆಳಿಗ್ಗೆ ಸುಳ್ಯದಲ್ಲಿ ಅಂತಿಮ ದರ್ಶನ ಮಾಡಿ ಸಂಜೆ ಅವರ ಹುಟ್ಟೂರು ಕನಕಪುರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.







