













ಸುಬ್ರಹ್ಮಣ್ಯದ ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಜೂ.4.ರಂದು ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಿತು.
ಬೆಳಗ್ಗೆ ಶ್ರೀ ಮಹಾ ಗಣಪತಿ ಹವನ
ಬಳಿಕ ನವಕ ಕಲಶ ಪೂಜೆ, ಪರಿವಾರ ಸಾನ್ನಿಧ್ಯಗಳಿಗೆ ತಂಬಿಲ ಸೇವೆ. ಮಧ್ಯಾಹ್ನ ಶ್ರೀ ಬಸವೇಶ್ವರ ದೇವರಿಗೆ ಏಕಾದಶ ರುದ್ರಾಭಿಷೇಕ ಸಹಿತ ಮಹಾ ಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಿತು.
ರಾತ್ರಿ ಶ್ರೀ ಬಸವೇಶ್ವರ ದೇವರಿಗೆ ರಂಗಪೂಜೆ ಸಹಿತ ಮಹಾಪೂಜೆ ನಡೆದು ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಆಡಳಿತ ಮಂಡಳಿ, ವಿವಿಧ ಸಮಿತಿಯವರು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.







