ಸವಣೂರು ಸೀತಾರಾಮ ರೈಯವರ 79 ನೇ ಹುಟ್ಟುಹಬ್ಬ ಆಚರಣೆ

0

ಶಾಲಾ ಪ್ರಾರಂಭೋತ್ಸವ- ಅಬಾಕಸ್ ತರಗತಿ ಉದ್ಘಾಟನೆ

ಸೀತಾರಾಮ ರೈ ನೂರಾರು ವರ್ಷ ಸಮಾಜ ಸೇವೆ ಮಾಡಿಕೊಂಡು ಬರಲಿ- ಗಣರಾಜ್ ಕುಂಬ್ಲೆಜ

ವಿದ್ಯಾರಶ್ಮಿಯಲ್ಲಿ ಉತ್ತಮ ಶಿಕ್ಷಣ -ಸವಣೂರು ಸೀತಾರಾಮ ರೈ

ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ


ಇಂಗ್ಲೀಷ್ ಇಂಟರ್‌ನ್ಯಾಷನಲ್ ಒಲಂಪಿಯಾಡ್ ಪರೀಕ್ಷೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿ, ಗೌರವಿಸಲಾಯಿತು.ಸವಣೂರು ಜಿನ ಬಸದಿ ಬಳಿಯಿಂದ ವಿದ್ಯಾರಶ್ಮಿ ವಿದ್ಯಾಲಯದ ತನಕ ಮೆರಣಿಗೆಯನ್ನು ಆಯೋಜಿಸಲಾಗಿತ್ತು.ಸವಣೂರು ಬಸದಿಯ ಅರ್ಚಕ ಶ್ರೇಯಾಂಸ ಕುಮಾರ್ ಇಂದ್ರ ತೆಂಗಿನಕಾಯಿ ಒಡೆಯುವ ಮೂಲಕ ಶುಭಹಾರೈಸಿದರು.ಸಹಕಾರರತ್ನ ಸೀತಾರಾಮ ರೈ ಅವರು ಮೆರಣಿಗೆಗೆ ಚಾಲನೆಗೈದು ಶುಭಹಾರೈಸಿದರು.
ಹುಟ್ಟುಹಬ್ಬ ಆಚರಣೆ: ಸೀತಾರಾಮ ರೈಯವರ ೭೯ನೇ ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾರ್ಥಿನಿ ಶ್ರದ್ಧಾ ಮತ್ತು ಬಳಗದವರು ಆರತಿ ಬೆಳಗಿಸಿ, ಜನ್ಮ ದಿನದ ಗೀತೆ ಹಾಡಿದರು. ಸಂಸ್ಥೆಯ ಸಿಬ್ಬಂದಿಗಳು ಹೂಗುಚ್ಚ ನೀಡಿ ಗೌರವಿಸಿದರು.

ಪುತ್ತೂರು:ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸಹಕಾರರತ್ನ' ಸವಣೂರು ಸೀತಾರಾಮ ರೈಯವರ ೭೯ನೇ ಹುಟ್ಟು ಹಬ್ಬ ಆಚರಣೆ, ಶಾಲಾ ಪ್ರಾರಂಭೋತ್ಸವ ಹಾಗೂ ಅಬಾಕಸ್ ತರಗತಿ ಉದ್ಘಾಟನೆ ಸಂಸ್ಥೆಯ ವಿದ್ಯಾಚೇತನ ಸಭಾಂಗಣದಲ್ಲಿ ನಡೆಯಿತು. ಸೀತಾರಾಮ ರೈ ನೂರಾರು ವರ್ಷ ಸಮಾಜ ಸೇವೆಯನ್ನು ಮಾಡಿಕೊಂಡು ಬರಲಿ-ಗಣರಾಜ್ ಕುಂಬ್ಲೆ: ರಾಮಕುಂಜ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಗಣರಾಜ್ ಕುಂಬ್ಲೆರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸವಣೂರಿನಲ್ಲಿ ೩೦ ವರ್ಷಗಳ ಹಿಂದೆ ಎರಡು-ಮೂರು ಅಂಗಡಿಗಳು, ಸೊಸೈಟಿ-ಬ್ಯಾಂಕ್ ಬಿಟ್ಟರೆ ಬೇರೇನೂ ಸೌಲಭ್ಯ ಇರದ ಸಂದರ್ಭದಲ್ಲಿ ಸವಣೂರು ಸೀತಾರಾಮ ರೈಯವರು ಸವಣೂರಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದರು. ಜೊತೆಗೆ ಸುಮಾರು ೨೦ ಎಕ್ರೆ ವಿಸ್ತೀರ್ಣದ ಬೋರುಗುಡ್ಡ ಪ್ರದೇಶವಾಗಿದ್ದ ಜಾಗದಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಶಿಕ್ಷಣ ಕಾಶಿಯಾಗಿ ಪರಿವರ್ತಿಸಿ, ಸವಣೂರಿನ ಅಭಿವೃದ್ಧಿಯ ಹರಿಕಾರರಾದರು.ಸವಣೂರಿನ ಶಿಲ್ಪಿಯಾಗಿ ಹತ್ತೂರಿನಲ್ಲಿ ಹೆಸರನ್ನು ಪಡೆದಿದ್ದಾರೆ.ಸುಳ್ಯವನ್ನು ಕಟ್ಟಿದ ಕುರುಂಜಿ ವೆಂಕಟ್ರಮಣ ಗೌಡರು, ಮಣಿಪಾಲವನ್ನು ಬೆಳೆಸಿದ ಟಿಎಂಎಪೈಗಳಂತೆ ಸೀತಾರಾಮ ರೈಯವರು ಸವಣೂರನ್ನು ಅಭಿವೃದ್ಧಿ ಪಥದತ್ತ ಸಾಗಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ.ತನ್ನೂರಿನ ಮಕ್ಕಳಿಗೆ ಆಧುನಿಕ ಶಿಕ್ಷಣ ದೊರೆಯಬೇಕೆಂಬ ಮಹತ್ವದ ಉzಶದಿಂದ ಕಟ್ಟಿ ಬೆಳೆಸಿದ ಶಿಕ್ಷಣ ಸಂಸ್ಥೆ ವಿದ್ಯಾರಶ್ಮಿ ಆಗಿದೆ ಎಂದರು.ಸೀತಾರಾಮ ರೈಯವರು ಸಮಾಜವನ್ನು ಕಟ್ಟುವ ಕಾಯಕದಲ್ಲಿ ನಿರತರಾದರು.ಸಾಮಾಜಿಕ, ಶಿಕ್ಷಣ ಸೇವೆಯೊಂದಿಗೆ ಸಹಕಾರ ಕ್ಷೇತ್ರದಲ್ಲಿ ರೈಯವರು ಸಾಧಿಸಿದ ಕೀರ್ತಿ ಬಹಳ ದೊಡ್ಡಮಟ್ಟದ್ದು.ಸೀತಾರಾಮ ರೈ ಹಾಗೂ ಅವರ ಒಡನಾಡಿಯಾಗಿದ್ದ ಕೆಎಸ್‌ಎನ್ ನಿಡ್ವಣ್ಣಾಯರವರು ಲವ-ಕುಶರಂತೆ ಸಮಾಜದಲ್ಲಿ ಕಂಡುಬರುತ್ತಿದ್ದರು ಎಂದು ಹೇಳಿದ ಗಣರಾಜ್ ಕುಂಬ್ಲೆರವರು, ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಉತ್ತಮ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿದೆ,ಇಲ್ಲಿ ವಿದ್ಯಾರ್ಥಿಗಳ ಶಿಸ್ತು, ನಿಯಮ ಪಾಲನೆಗಳು ಕಂಡು ಮನಸು ತುಂಬಿ ಬಂತು ಎಂದು ಹೇಳಿದರಲ್ಲದೆ,ಸಂಸ್ಥೆಯು ಮುಂದೆಯೂ ಅತ್ಯುತ್ತಮವಾದ ಸಾಧನೆಗಳನ್ನು ಮಾಡಲಿ, ಸೀತಾರಾಮ ರೈ ಅವರು ನೂರಾರು ವರ್ಷ ಸಮಾಜ ಸೇವೆಯನ್ನು ಮಾಡಿಕೊಂಡು ಬರಲಿ ಎಂದು ಶುಭ ಕೋರಿದರು. ವಿದ್ಯಾರಶ್ಮಿಯಲ್ಲಿ ಉತ್ತಮ ಶಿಕ್ಷಣ-ಸೀತಾರಾಮ ರೈ: ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕಸಹಕಾರ ರತ್ನ’ ಸವಣೂರು ಸೀತಾರಾಮ ರೈಯವರು ದೀಪಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು.ಬಳಿಕ ಅವರು ಮಾತನಾಡಿ, ನನ್ನ ೭೯ನೇ ಹುಟ್ಟಹಬ್ಬದ ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಪ್ರಾರಂಭೋತ್ಸವ ಮತ್ತು ಅಬಾಕಾಸ್ ತರಗತಿ ಉದ್ಘಾಟನೆಯನ್ನು ಹಮ್ಮಿಕೊಂಡಿzವೆ.ಶಾಲಾ ಪ್ರಾರಂಭೋತ್ಸವ ಎಂದರೆ ಹೊಸ ಮಕ್ಕಳು ಶಾಲೆಗೆ ಸೇರುವಾಗ ಯಾವುದೇ ಆಳಕು-ಅಂಜಿಕೆ ಇಲ್ಲದೇ ಲವಲವಿಕೆಯಿಂದ ಇರಬೇಕು ಎಂಬ ಉzಶದಿಂದ ಕಾರ್ಯಕ್ರಮ ಮಾಡಲಾಗಿದೆ.ವಿದ್ಯಾರ್ಥಿಗಳು ಅತ್ಯುತ್ತಮವಾದ ಕಲಿಕೆಗೆ ಗಮನವನ್ನು ನೀಡಬೇಕು, ಉತ್ತಮ ಗುರಿಯೊಂದಿಗೆ ಕಲಿಕೆಯನ್ನು ಪಡೆದಾಗ ಮಾತ್ರ ಸಮಾಜದಲ್ಲಿ ಗೌರವ ಪ್ರಾಪ್ತವಾಗುತ್ತದೆ.ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಎಲ್ಲಾ ರೀತಿಯಿಂದಲೂ ಉತ್ತಮ ಶಿಕ್ಷಣ,ಸಂಸ್ಕಾರವನ್ನು ನೀಡುತ್ತಿದೆ ಎಂದು ಹೇಳಿದರು.


ವಿದ್ಯಾರ್ಥಿಗಳು ಬೆಳೆಯಬೇಕು -ಅಶ್ವಿನ್ ಎಲ್ ಶೆಟ್ಟಿ: ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಸಾಧನೆಯನ್ನು ಮಾಡಬೇಕು, ತಮ್ಮ ಸಾಧನೆಗೆ ಬೆಂಬಲ ನೀಡುವವರನ್ನು ವಿದ್ಯಾರ್ಥಿಗಳು ಸ್ನೇಹಿತರಾಗಿ ಮಾಡಿಕೊಳ್ಳಬೇಕು.ಪಠ್ಯ ಚಟುವಟಿಕೆಯಲ್ಲಿ ಯಾವುದೇ ಸಮಸ್ಯೆ ಬಂದಲ್ಲಿ ಶಿಕ್ಷಕರನ್ನು ಪ್ರಶ್ನಿಸುವ ಮೂಲಕ ವಿದ್ಯಾರ್ಥಿಗಳು ಬೆಳೆಯಬೇಕು ಎಂದು ಹೇಳಿದರು.ನಮ್ಮ ಸಂಸ್ಥೆಯ ಸಂಚಾಲಕರಾದ ಸವಣೂರು ಸೀತಾರಾಮ ರೈಯವರ ೭೯ನೇ ಹುಟ್ಟುಹಬ್ಬ ಸಂಭ್ರಮ ಕಾರ್‍ಯ ತುಂಬಾ ಅರ್ಥಪೂರ್ಣವಾಗಿ ನಡೆದಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು
ಅಬಾಕಸ್ ಆತ್ಮವಿಶ್ವಾಸ ಹೆಚ್ಚಿಸುತ್ತದೆ-ಪ್ರಪುಲ್ಲಾ ಗಣೇಶ್: ಐಆರ್‌ಸಿಎಂಡಿ ಎಜ್ಯುಕೇಶನ್ ಸೆಂಟರ್‌ನ ಸಿ.ಇ.ಓ.ಪ್ರಪುಲ್ಲಾ ಗಣೇಶ್ ಅವರು ಮಾತನಾಡಿ,೨೦೨೬-೨೭ನೇ ಶೈಕ್ಷಣಿಕ ವರ್ಷದಿಂದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಒಂದನೇ ತರಗತಿಯಿಂದ ೫ನೇ ತರಗತಿವರೆಗಿನ ವಿದ್ಯಾರ್ಥಿಗಳ ಗಣಿತ ಕೌಶಲ್ಯವನ್ನು ಹೆಚ್ಚಿಸಲು ಅಬಾಕಸ್ ತರಗತಿಗಳನ್ನು ಪ್ರಾರಂಭಿಸಲಾಗಿದೆ.ಅಬಾಕಸ್ ಒಂದು ಸರಳ ಹಾಗೂ ಪರಿಣಾಮಕಾರಿ ಗಣಿತ ಸಾಧನವಾಗಿದ್ದು ಇದರ ಮೂಲಕ ಮಕ್ಕಳು ಲೆಕ್ಕಾಚಾರವನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯುತ್ತಾರೆ.ಈ ತರಗತಿಯಿಂದ ಮಕ್ಕಳ ಸ್ಮರಣಶಕ್ತಿ ಮತ್ತು ತಾರ್ಕಿಕ ಚಿಂತನೆ ಅಭಿವೃದ್ಧಿ, ಗಣಿತ ವಿಷಯದ ಆಸಕ್ತಿ ಹೆಚ್ಚಿಸುವುದು.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಹಾಗೂ ಮಗುವಿನ ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚಿಸುತ್ತದೆ.ಹಾಗಾಗಿ ಅಬಾಕಸ್‌ನಿಂದ ಒಂದು ಮಗುವಿನ ಸಂಪೂರ್ಣ ಮೆದುಳಿನ ಬೆಳವಣಿಗೆಯ ಜೊತೆಗೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ.ಅನುಭವೀ ಶಿಕ್ಷಕರಿಂದ ಈ ತರಗತಿಯು ನಡೆಯಲಿದೆ ಎಂದು ಹೇಳಿದರು.


ಹುಟ್ಟು ಹಬ್ಬ ಆಚರಣೆ ಸಂಭ್ರಮ ಸಂತೋಷ ತಂದಿದೆ-ಮಹೇಶ್ ರೈ ಸವಣೂರು: ಅಮೇರಿಕಾದಲ್ಲಿ ಇಂಜಿನಿಯರ್ ಆಗಿರುವ ಸವಣೂರು ವಿದ್ಯಾರಶ್ಮಿ ಸಂಸ್ಥೆಯ ಟ್ರಸ್ಟಿ ಮಹೇಶ್ ರೈ ಸವಣೂರುರವರು ಮಾತನಾಡಿ, ಹೊಸದಾಗಿ ಶಾಲೆಗೆ ಸೇರಿದ ಪುಟಾಣಿಗಳಿಗೆ ಉತ್ತಮ ಭವಿಷ್ಯವನ್ನು ಹಾರೈಸಿ, ಸಂಸ್ಥೆಯ ಸಂಚಾಲಕರಾದ ಸೀತಾರಾಮ ರೈ ಅವರ ಹುಟ್ಟು ಹಬ್ಬ ಆಚರಣೆ ಸಂಭ್ರಮ ಸಂತೋಷ ತಂದಿದೆ ಎಂದರು.


ಸೀತಾರಾಮ ರೈ ಅವರು ಮಹಾಸಾಧಕರು-ಎನ್.ರವೀಂದ್ರ ಶೆಟ್ಟಿ ನುಳಿಯಾಲು: ಉದ್ಯಮಿ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ಸೀತಾರಾಮ ರೈ ಮತ್ತು ಕಸ್ತೂರಿಕಲಾ ಎಸ್ ರೈ ದಂಪತಿಯನ್ನು ಸನ್ಮಾನಿಸಿ, ಮಾತನಾಡಿ ಸೀತಾರಾಮ ರೈ ಮತ್ತು ನಾನು ಬಹಳ ವರ್ಷಗಳ ಒಡನಾಡಿಗಳಾಗಿದ್ದು, ಸೀತಾರಾಮ ರೈಯವರ ಸಾಧನೆಯನ್ನು ಕಂಡು ಮನಸ್ಸು ತುಂಬಿ ಬಂದಿದೆ.ಸವಣೂರಿನ ಚಿತ್ರಣವನ್ನೇ ಬದಲಾವಣೆ ಮಾಡಿದ ಸೀತಾರಾಮ ರೈ ಅವರು ಮಹಾಸಾಧಕರು ಎಂದು ಪ್ರಶಂಸಿದರು.


ಸವಣೂರು ಸೀತಾರಾಮ ರೈಯವರ ಪತ್ನಿ ಕಸ್ತೂರಿಕಲಾ ಎಸ್ ರೈ ಸವಣೂರು, ಸಂಸ್ಥೆಯ ಟ್ರಸ್ಟಿಗಳಾದ ಉದ್ಯಮಿ ಎನ್.ಸುಂದರ ರೈ ಸವಣೂರು ಮತ್ತು ರಶ್ಮಿ ಅಶ್ವಿನ್ ಎಲ್ ಶೆಟ್ಟಿ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾಗಿರುವ ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು..ವಿದ್ಯಾರ್ಥಿಗಳಾದ ಸಂತನುಕೃಷ್ಣ ಸ್ವಾಗತಿಸಿ,ಆಯಿಷತ್ ಹನಾ ಕಾರ್‍ಯಕ್ರಮ ನಿರೂಪಿಸಿದರು.ಕೃಪಾಲಿ ವಂದಿಸಿದರು.