













ಕೊಡಿಯಾಲ
ಸ್ನೇಹಿತರ ಬಳಗ ಕಲ್ಪಡವು ಈ ವರ್ಷ ತನ್ನ ಹತ್ತನೇ ವರುಷದ ದಶಮ ಸಂಭ್ರಮ ಆಚರಿಸುತ್ತಿದ್ದು, ಅದರ ಅಂಗವಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂವಪ್ಪೆ ಇದರ 2026-27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್, ಪುಸ್ತಕಗಳು ಹಾಗೂ ಪೆನ್-ಪೆನ್ಸಿಲ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷರಾದ ಸುರೇಶ್ ಕೆ ಎಸ್ ಗುತ್ತು, ಗೌರವಾಧ್ಯಕ್ಷರಾದ ಶಿವರಾಮ ಉಪಾಧ್ಯಾಯ, ಗೌರವ ಸಲಹೆಗಾರರಾದ ಚಿದಾನಂದ ಉಪಾಧ್ಯಾಯ, ಸಂಚಾಲಕರಾದ ಕೇಶವ ಕೆ ಪಿ ಕಲ್ಪಡ ತೋಟ, ಸಹಸಂಚಾಲಕರಾದ ಯುವರಾಜ್ ಕೆ ಪಿ, ಕಾರ್ಯದರ್ಶಿಯಾದ ಸುಜಿತ್ ಕೆ, ಜೊತೆಗೆ ಕಾರ್ಯದರ್ಶಿಯಾದ ಲೋಕೇಶ್ ಕೆ.ವಿ. ಸ್ಥಾಪಕ ಅಧ್ಯಕ್ಷರಾಗಿರುವ ಪ್ರಸಾದ್ ಕೆ ಕೆ, ಮಾಜಿ ಅಧ್ಯಕ್ಷರಾರ ಗಣೇಶ್ ಅಂಗಾರಡ್ಕ ಹಾಗೂ ಸದಸ್ಯರಾದ ಧರ್ಮಪಾಲ ಕೆ, ರಮೇಶ್ ಕೆ ಪಿ ಇಪ್ಪುಳ್ತಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕರಾದ ನಿರ್ಮಲ ಕೆ.ಎಸ್., ಶಿಕ್ಷಕರಾದ ನಿವೇದಿತಾ, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.







