
ಸುಳ್ಯದ ರೋಟರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ಜೂ.13ರಂದು ನಡೆಯಿತು.














ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ಮತದಾನದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ನಾಯಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ
ಕು. ರಿದಾ ಫಾತಿಮ ಹಾಗೂ ಬೆಂಬಲಿಗರಾದ ವಂದಿತ , ಅಹನ್ ಕಿರಣ್, ಕು.ಶಿವಾಲಿ ಡಿ.ಎ ಹಾಗೂ ಬೆಂಬಲಿಗರಾದ ಶಝಾ ಫಾತಿಮ ,ಶಿವಾಲಿ.ಡಿ.ಎ ಉಪನಾಯಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಚೈತನ್, ಸ್ವಸ್ತಿಕ,ಸಮೃದ್ಧ್ ಹಾಗೂ ಬೆಂಬಲಿಗರಾದ ಅಹನ್ ಕಿರಣ್, ಲಿಖಿತಾ, ಶ್ರೀಜಿತ್, ಹಿತೇಶ್ ಪ್ರಚಾರ ಭಾಷಣ ಮಾಡಿದರು.

ಮತದಾನದ ಬಳಿಕ ಮೂರು ಸುತ್ತಿನ ಮತ ಎಣಿಕೆ ಆರಂಭಗೊಂಡಿತು. ಇದರಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿ ಕು. ರಿದಾ ಫಾತಿಮ ನಾಯಕಿಯಾಗಿ ಆಯ್ಕೆಯಾದರೆ ,ಒಂಭತ್ತನೇ ತರಗತಿ ವಿದ್ಯಾರ್ಥಿ ಸಮೃದ್ಧ್ ಕೆ. ಆರ್ ಉಪನಾಯಕನಾಗಿ ಆಯ್ಕೆಯಾದರು.








