













ಕೊಲ್ಲಮೊಗ್ರದ ವ್ಯಕ್ತಿಯೋರ್ವರು ಕನ್ಯಾನದಲ್ಲಿ ಟಿಪ್ಪರ್ ಅಡಿಗೆ ಬಿದ್ದು ಮೃತಪಟ್ಟ ಘಟನೆ ಜೂ. 17 ರಂದು ವರದಿಯಾಗಿದೆ.
ಕೊಲ್ಲಮೊಗ್ರು ಗ್ರಾಮದ ಕೊಂದಾಳ ನಿವಾಸಿ ಗುಡ್ಡಪ್ಪ ಗೌಡ ಅವರ ಪುತ್ರ ಮಹೇಶ್ ಮೃತಪಟ್ಟ ವ್ಯಕ್ತಿ.
ಜೂ.೧೭ ರಂದು ಕನ್ಯಾನದ ಪಾದೆಕಲ್ಲು, ಪರೋಡಿ ಸರವುಗುಡ್ಡೆ ಎಂಬಲ್ಲಿ ಲಾರಿಯಲ್ಲಿ ತಾಂತ್ರಿಕ ತೊಂದರೆ ಕಂಡು ಬಂತೆಂದು ಟಿಪ್ಪರ್ ನಿಲ್ಲಿಸಿ ಚಾಲಕ ಮಹೇಶ್ರವರು ಹಿಂಬದಿ ಹೋಗಿ ದುರಸ್ತಿ ಮಾಡುವಾಗ ಟಿಪ್ಪರ್ ಹಿಬ್ಬಂದಿ ಚಲಿಸಿ ಚಕ್ರದಡಿ ಬಿದ್ದು ಸ್ಥಳದಲ್ಲೇ ಮೃತಪಟ್ಟರು.
ಮೂಲತಃ ಕೊಲ್ಲಮೊಗ್ರು ನಿವಾಸಿಯಾಗಿದ್ದ ಮಹೇಶ್ರವರು ಪ್ರಸ್ತುತ ಉಪ್ಪಿನಂಗಡಿಯ ಬಂದಾರು ಎಂಬಲ್ಲಿ ಜಾಗ ಖರೀದಿಸಿ ಪತ್ನಿ, ಮಕ್ಕಳೊಂದಿಗೆ ವಾಸವಿದ್ದರು. ಮೃತರು ತಂದೆ, ತಾಯಿ , ಪತ್ನಿ ಲೀಲಾವತಿ, ಪುತ್ರಿಯರಾದ ಮಾನ್ಯ, ಮೋಕ್ಷ, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.







