ಜೇಸಿಐ ಸುಳ್ಯ ಸಿಟಿ ಹಾಗೂ ಯೋಗೇನ ಚಿತ್ತಸ್ಯ ಯೋಗ ಕೇಂದ್ರ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

0

ಮಹಾ ರಕ್ತದಾನಿ ಪಿ. ಬಿ. ಸುಧಾಕರ್ ರೈ ರವರಿಗೆ ಸನ್ಮಾನ

ಜೆ ಸಿ ಐ ಸುಳ್ಯ ಸಿಟಿ ಹಾಗೂ ಯೋಗೇನ ಚಿತ್ತಸ್ಯ ಯೋಗ ಕೇಂದ್ರ ಸುಳ್ಯ ಇದರ ಸಹಯೋಗದಲ್ಲಿ 12ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಜೂ 20 ರಂದು ಸುಳ್ಯದ ವರ್ತಕರ ಸಭಾಭವನದಲ್ಲಿ ನಡೆಯಿತು.

ಆರೋಗ್ಯಕರ ವಯಸ್ಸಿಗಾಗಿ ಯೋಗ ಮಾಡೋಣ” ಎಂಬ ದ್ವೇಯದಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಘಟಕದ ಸಭಾಪತಿಗಳು ಹಾಗೂ ಮಹಾರಕ್ತದಾನಿ ಪಿ ಬಿ ಸುಧಾಕರ್ ರೈ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಸಿಟಿ ಇದರ ಅಧ್ಯಕ್ಷರಾದ JFM ನಾಗವೇಣಿ ದಾಮೋದರ ಕೋರಡ್ಕ ಇವರು ವಹಿಸಿದ್ದರು.
ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಯೋಗ ಶಿಕ್ಷಕರಾದ ಸಂತೋಷ್ ಮುಂಡಕಜೆ ಯೋಗದ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ವಲಯ ಸಂಯೋಜಕರಾದ ವಿಷ್ಣುಪ್ರಕಾಶ್ ನಾರ್ಕೋಡು, ಸಾಹಿತಿ ಮತ್ತು ಸಮಾಜಸೇವಕ ಉದಯಭಾಸ್ಕರ್ ಸುಳ್ಯ,ಯೋಗ ತರಬೇತುದಾರರಾದ
ಶ್ರೀಮತಿ ಪ್ರಶ್ವಿಜ ಕೆ ಎಸ್ ಯೋಗ ಶಿಕ್ಷಕಿ, ಯೋಗೇನ ಚಿತ್ತಸ್ಯ ಯೋಗ ಕೇಂದ್ರ, ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಸದಸ್ಯರುಗಳು ಯೋಗಾರ್ಥಿಗಳಾಗಿ ಭಾಗವಹಿಸಿದ್ದರು.