ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಯೋಗ ಒಂದು ಉತ್ತಮ ಸಾಧನ

0

ಭಾರತ ಜಗತ್ತಿಗೆ ಆನೇಕ ಕೊಡುಗೆಗಳನ್ನು ನೀಡಿದೆ ಅದರಲ್ಲಿ ಅತೀ ಮಹತ್ವದ ಕೊಡುಗೆ ವೆಂದರೆ ಯೋಗ. ಮನುಷ್ಯನಿಗೆ ಅರೋಗ್ಯ ಬಹುಮುಖ್ಯವಾದದ್ದು ಆತನ ಸರ್ವತೋಮುಖ ಬೆಳವಣಿಗೆಗೆ ಯೋಗ ಒಂದು ಉತ್ತಮ ಸಾಧನ.

ಮನಸ್ಸು,ದೇಹ ಮತ್ತು ಆತ್ಮ ಈ ಮೂರು ಅಂಶಗಳನ್ನು ಏಕಾಗ್ರತೆಗೊಳಿಸಲು ಯೋಗ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಯೋಗ ಒಂದು ವ್ಯಾಯಾಮ ಮಾತ್ರವಲ್ಲದೇ ಮನುಷ್ಯನ ಈ ಒತ್ತಡ ಬದುಕಿನಲ್ಲಿ ಪ್ರಕೃತಿ ಮತ್ತು ಮನುಷ್ಯನ ನಡುವೆ ಸಾಮರಸ್ಯವನ್ನುoಟು ಮಾಡಲು ಯೋಗ ಸಹಕಾರಿಯಾಗಿದ್ದು 6000 ವರ್ಷಕ್ಕೂ ಹಳೆಯದಾದ ಭೌತಿಕ,ಮಾನಸಿಕ ಮತ್ತು ಅಧ್ಯಾತ್ಮಿಕ ಅಭ್ಯಾಸವಾಗಿದೆ. ಜೂನ್ 21 ರಂದು ವಿಶ್ವ ಯೋಗ ದಿನವಾಗಿ ಆಚರಣೆ ಮಾಡಲಾಗುತ್ತಿದೆ.

ಈ ಸಮಯದಲ್ಲಿ ಉತ್ತರ ಭಾಗದಲ್ಲಿ ಹಗಲು ದೀರ್ಘವಾಗಿರುತ್ತದೆ,ದಕ್ಷಿಣ ದಲ್ಲಿ ಹಗಲಿನ ಅವಧಿ ಕಡಿಮೆಯಿರುತ್ತದೆ ಸೂರ್ಯ ತನ್ನ ಪಥವನ್ನು ದಕ್ಷಿಣ ದತ್ತ ಬದಲಿಸುತ್ತಾನೆ ಗುರು ಪೂರ್ಣಿಮೆ ಕೂಡ ಹೌದು ಈ ಎಲ್ಲ ವಿಚಾರಗಳಿಂದ ಯೋಗ ಪ್ರಾರಂಭಿಸಲು ಸೂಕ್ತವಾದ ದಿನವೆಂದು ಪ್ರಧಾನ ಮಂತ್ರಿ ಮೋದಿಯವರು ವಿಶ್ವ ಸಂಸ್ಥೆಯ ಭಾಷಣದಲ್ಲಿ ತಿಳಿಸಿದ್ದರು ಈ ಹಿನ್ನಲೆ ಯಲ್ಲಿ 2014 ರಲ್ಲಿ ಡಿಸೇಂಬರ್ 11 ವಿಶ್ವಸಂಸ್ಥೆ ಮಸೂದೆ ಮಂಡಿಸಲಾಯಿತು.

ಈ ಕರಡಿಗೆ 177 ದೇಶ ಒಪ್ಪಿಗೆ ಸೂಚಿಸಿದವು ತದನಂತರ ಜೂನ್ 21 ಈ ದಿನವನ್ನು ವಿಶ್ವ ಯೋಗ ದಿನವನ್ನಾಗಿ ಘೋಷಿಸಲಾಯಿತು.ಈ ಹಿಂದೆ ಭಾರತಕ್ಕೆ ಸೀಮಿತವಾಗಿದ್ದ ಯೋಗವನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಭಾರತ ಯಶಸ್ವಿಯಾಗಿದೆ 2015 ಜೂನ್ 21 ರಂದು ಪ್ರಧಾನಿ ಮೋದಿ 84 ದೇಶದ ಪ್ರತಿನಿಧಿಗಳು ಸೇರಿ 35985 ಜನರು ದೆಹಲಿಯ ರಾಜಪಥ್ 35 ನಿಮಿಷ 21 ಆಸನ ಪ್ರದರ್ಶಿಸಿದರು ಇದು ಗಿನ್ನೆಸ್ ದಾಖಲೆಯಾಯಿತು,2015 ರಲ್ಲಿ ಯೋಗ ದಿನಾಚರಣೆ ನೆನಪಿಗೆ ಭಾರತೀಯ ರೀಸರ್ವ್ ಬ್ಯಾಂಕ್ 10 ರೂಪಾಯಿ ನಾಣ್ಯ ಬಿಡುಗಡೆ ಮಾಡಿತು.

“ಅರೋಗ್ಯಕ್ಕಾಗಿ”ಯೋಗ ಎನ್ನುವ ಸಂದೇಶ ಜನರಿಗೆ ಯೋಗದ ಮೇಲೆ ಆಸಕ್ತಿ ಮೂಡಲು ಪ್ರಾರಂಭವಾಯಿತು ಈಗ ಯೋಗ ಸಣ್ಣ ಕೋಣೆಯಿಂದ ಹಿಡಿದು ನಗರ ಉದ್ಯಾನವನಗಳಿಂದ ಕ್ರೀಡಾ ಸಂಕಿರ್ಣವರೆಗೆ ಯೋಗ ವ್ಯಾಯಾಮ ಮಾಡಲಾಗುತ್ತಿರುವುದು ಖುಷಿಯ ವಿಚಾರ.ಪ್ರಾಚೀನ ಪತಂಜಲಿ ಯವರ ಯೋಗ ಭಾರತದ ಸಾಂಸ್ಕೃತಿಕ ಪರಿಚಯವನ್ನು ಜಗತ್ತಿಗೆ ತಿಳಿಸಿಕೊಟ್ಟಿರುವುದು ನಮಗೆಲ್ಲ ಹೆಮ್ಮೆ ಪಡಬೇಕಾದ ಸಂಗತಿ ಆಧುನಿಕ ಜಗತ್ತಿನಲ್ಲಿ ಮನುಷ್ಯನಿಗೆ ಒತ್ತಡ ಹೆಚ್ಚಾಗುತ್ತಿದ್ದು ಇವೆಲ್ಲ ನಿಯಂತ್ರಿಸಲು ತನ್ನನ್ನು ತಾನು ಅರಿಯಲು ಯೋಗ ಒಂದು ಸಾಧನವಾಗಿದೆ ವೈಜ್ಞಾನಿಕವಾಗಿ ಕೂಡ ದೃಢಪಟ್ಟಿರುವುದನ್ನು ಕಾಣಬಹುದು ನಾವೆಲ್ಲ ಕನಿಷ್ಠ ಸಮಯವಾದರೂ ಪ್ರತೀ ನಿತ್ಯ ಯೋಗ,ಧ್ಯಾನ ಮಾಡುವುದರಿಂದ ಹೊಸ ಪರಿವರ್ತನೆ ದಾರಿ ಮಾಡಿಕೊಡಬಹುದು ತಮಗೆಲ್ಲರಿಗೂ ವಿಶ್ವ ಯೋಗ ದಿನ


– ಪ್ರಜ್ಞಾ ಎಸ್ ನಾರಾಯಣ್ ಅಚ್ರಪ್ಪಾಡಿ