ಪೆರುವಾಜೆ ಗ್ರಾ.ಪಂ. ಆಶ್ರಯದಲ್ಲಿ ಭೇಟಿ ಬಚಾವೋ ಭೇಟಿ ಪಡಾವೋ ಅರಿವು ಕಾರ್ಯಕ್ರಮ

0

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುಳ್ಯ, ಗ್ರಾ. ಪಂ. ಪೆರುವಾಜೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಸಬಲೀಕರಣ ಘಟಕ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಭೇಟಿ ಬಚಾವೋ ಭೇಟಿ ಪಡಾವೋ ಅರಿವು ಕಾರ್ಯಕ್ರಮವನ್ನು ಪೆರುವಾಜೆ ಗ್ರಾ.ಪಂ. ಸಭಾಭವನದಲ್ಲಿ ಆಡಳಿತ ಅಧಿಕಾರಿ ಫಯಾಜ್ ಅಹಮದ್ ರವರ ಅಧ್ಯಕ್ಷತೆಯಲ್ಲಿ ಜೂ. 23ರಂದು ನಡೆಯಿತು. ಸುಳ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೈಲಜಾ ಬಿ ಉದ್ಘಾಟಿಸಿ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ರುಡ್ ಸೆಟ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಹಾಗೂ ಪೆರುವಾಜೆ ದೇವಸ್ಥಾನದ ಮೊಕ್ತೇಸರರಾದ ಸುನಿಲ್ ರೈ, ಮಹಿಳಾ ಮೇಲ್ವಿಚಾರಕಿ ಉಷಾಪ್ರಸಾದ್ ರೈ, ಬೆಳ್ಳಾರೆ ಆರಕ್ಷಕ ಠಾಣಾ ಕಾನ್ಸ್ಟೇಬಲ್ ಪೂಜಾ, ಆರೋಗ್ಯ ಪರಿಶೀಲನಾಧಿಕಾರಿ ಚರಣ್ ಕುಮಾರ್, ಆರೋಗ್ಯ ಸುರಕ್ಷಾಧಿಕಾರಿ ರತ್ನಾವತಿ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಮಾಲಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಶಹನಾಜ್, ಮಾಜಿ ಸದಸ್ಯರಾದ ಪದ್ಮನಾಭ ಶೆಟ್ಟಿ, ಪೆರುವಾಜೆ ಸ.ಹಿ.ಪ್ರಾ. ಶಾಲಾ ಶಿಕ್ಷಕಿ ಶಾಂತಮ್ಮ, ಕೃಷಿ ಸಖಿ ಪದ್ಮಾವತಿ, ಆಶಾ ಕಾರ್ಯಕರ್ತೆ, ಎಂ.ಬಿ.ಕೆ ಹಾಗೂ ಗೊಂಚಲು ಅಧ್ಯಕ್ಷೆ ಶ್ರೀಮತಿ ದೇವಕಿ, ಎಲ್.ಸಿ.ಆರ್.ಪಿ ರೇಖಾ, ಕಾವಲು ಸಮಿತಿ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು ಹಾಜರಾಗಿದ್ದರು. ಗ್ರಾ.ಪಂ. ಸಿಬ್ಬಂದಿ ಜಯಲಕ್ಷ್ಮಿ ಪ್ರಾರ್ಥಿಸಿದರು. ಅಂಗನವಾಡಿ ಕಾರ್ಯಕರ್ತೆ ರಂಜಿತಾ ರೈ ಸ್ವಾಗತಿಸಿ, ಮುರ್ಕೆತ್ತಿ ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿ ವಂದಿಸಿದರು. ಸ್ತ್ರೀಶಕ್ತಿ ಗೊಂಚಲು ಅಧ್ಯಕ್ಷೆ ದೇವಕಿ ಮುರ್ಕೆತ್ತಿ ಸಹಕರಿಸಿದರು. ಮುಕ್ಕೂರು ಅಂಗನವಾಡಿ ಕಾರ್ಯಕರ್ತೆ ರೂಪ ಕಾರ್ಯಕ್ರಮ ನಿರೂಪಿಸಿದರು.