ಕಜ್ಜೋಡಿ ದಿ| ಶ್ರೀಧರ ಭಾಗವತ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

0

ಹರಿಹರ ಪಲ್ಲತ್ತಡ್ಕದ ಕಜ್ಜೋಡಿ ನಿವಾಸಿ, ನಿವೃತ್ತ ಮುಖ್ಯೋಪಾಧ್ಯಾಯ ದಿ| ಶ್ರೀಧರ ಭಾಗವತ್ ಅವರಿಗೆ ಜೂ.28 ರಂದು ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಹರಿಹರೇಶ್ವರ ದೇವಾಲಯದ ಕಲಾ ಮಂದಿರದಲ್ಲಿ ನಡೆಯಿತು.

ಈ ಬಗ್ಗೆ ನಡೆದ ಸಭಾ ಕಾರ್ಯಕ್ರಮ
ಅಧ್ಯಕ್ಷತೆಯನ್ನು ವಹಿಸಿದ
ಸುಳ್ಯ ತಾಲೂಕು ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘ, ಸುಳ್ಯ ಇದರ ಅಧ್ಯಕ್ಷ ಡಾ ರಂಗಯ್ಯರವರು ಮಾತನಾಡಿ, ಸಮಾಜದಲ್ಲಿ ಹೇಗೆ ಬದುಕಬೇಕೆಂಬುದಕ್ಕೆ ಭಾಗವತರು ಮಾದರಿ ಇವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದರು.


ವೇದಿಕೆಯಲ್ಲಿ ಸಚಿನ್ ಕ್ರೀಡಾ ಸಂಘ ಹರಿಹರ ಪಲ್ಲತ್ತಡ ಇದರ ಅಧ್ಯಕ್ಷ ಮನೀಶ್ ಗುಂಡಿಹಿತ್ಲು, ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಗುಣವರ್ದನ ಕೆದಿಲ, ನಿವೃತ್ತ ಉಪನ್ಯಾಸಕ ರಾಮಚಂದ್ರ ಪಳಂಗಾಯ, ಶ್ರೀಧರ ಭಾಗವತ್ ಅವರ ಪುತ್ರ ಶರತ್ ಡಿ ಎಸ್
ವೇದಿಕೆಯಲ್ಲಿ ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು.


ಕಾರ್ಯಕ್ರಮದ ಮೊದಲಿಗೆ ಡಾ.ಚಂದ್ರಶೇಖರ ಕಿರಿಭಾಗರವರು ಶ್ರೀ ಯುತರ ಭಾವಚಿತ್ರ ಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಲಾಯಿತು.
ಹರ್ಷಿತಾ ಹಾಗು ಶ್ರೀ ದೇವಿ ಪ್ರಾರ್ಥಿಸಿದರು. ಪ್ರಭಾಕರ ಕಿರಿಭಾಗ ಸ್ವಾಗತಿಸಿ, ಪ್ರೀಯ ಕಲ್ಲೇಮಠ ವಂದಿಸಿದರು. ಕಾರ್ಯಕ್ರಮ ನಿರೂಪಿಸಿದರು.