ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಸುಳ್ಯ, ವಕೀಲರ ಸಂಘ ಸುಳ್ಯ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್, ಬೆಳ್ಳಾರೆ ಇವರ ಸಂಯುಕ್ತಾಶ್ರಯದಲ್ಲಿ
ಅಂತರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನಾಚರಣೆ ಕಾರ್ಯಕ್ರಮವು ಜೂ.29 ರಂದು ಬೆಳ್ಳಾರೆ ಕೆಪಿಎಸ್ ಸಭಾಂಗಣದಲ್ಲಿ ನಡೆಯಿತು.















ಕಾರ್ಯಕ್ರಮವನ್ನು ಸುಳ್ಯ ನ್ಯಾಯಾಲಯದ
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಟಿ.ದಮಯಂತಿ ಸೋಮಯ್ಯ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿ ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಯುವ ಜನರಲ್ಲಿ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ.
ವಿದ್ಯಾರ್ಥಿಗಳು ಯಾವುದೇ ಮಾದಕ ದ್ರವ್ಯಗಳಿಗೆ ಬಲಿಯಾಗಬಾರದು.ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮಕ್ಕಳ ಕೊಡುಗೆ ಇರಲಿ ಎಂದು ಹೇಳಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ನ್ಯಾಯವಾದಿಗಳಾದ ಜಗದೀಶ್ ಹುದೇರಿ ಮಾದಕ ವ್ಯಸನದ ಜಾಗೃತಿ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕೆಪಿಎಸ್.ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ಹರ್ಷ ಜೋಗಿಬೆಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ,ಕೆ.ಪಿ.ಎಸ್. ಉಪಸ್ಥಿತರಿದ್ದರು.
ಕೆ.ಪಿಎಸ್.ಪ್ರಾಂಶುಪಾಲ ಜನಾರ್ದನ ಕೆ.ಎನ್.ಸ್ವಾಗತಿಸಿ,ಉಪಪ್ರಾಂಶುಪಾಲೆ ಉಮಾಕುಮಾರಿ ವಂದಿಸಿದರು.
ಶಿಕ್ಷಕ ಪುರಂದರರವರು ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳು ಪ್ರಾರ್ಥಿಸಿ, ವಂದಿಸಿದರು.
ಬೀಟ್ ಪೊಲೀಸರಾದ ಮನು ಮತ್ತು ಮಹಾದೇವ ಪ್ರಸಾದ್ ಸಹಕರಿಸಿದರು.








