













ಪುತ್ತೂರು ತಾಲೂಕಿನ ಕಣಿಯಾರು ಬೈಲು ಸರಕಾರಿ ಕಿರಿಯ ಪ್ರಾಥಮಿಕ
ಶಾಲೆಯ ಸಹ ಶಿಕ್ಷಕ ಬೆಳ್ಳಾರೆ ಗಂಗಾಧರ ನಾಯ್ಕ ಪರ್ತಿಕೆರೆಯವರು ಜೂ. 30 ರಂದು ವಯೋ ನಿವೃತ್ತಿ ಹೊಂದಿದರು.
ಸುಮಾರು 35 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಇವರು ಬೆಳ್ಳಾರೆ ಗ್ರಾಮದ ಪರ್ತಿಕೆರೆಯ ದಿ. ಕುಂಞಪ್ಪ ನಾಯ್ಕ ಮತ್ತು ಗಿರಿಜಾ ದಂಪತಿಯ ಪುತ್ರ. 1991ರಲ್ಲಿ ಬೆಳೆಯೂರುಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದ್ದ ಇವರು 1991 ನವೆಂಬರಿನಲ್ಲಿ ಮಾಡಾವು ಕಟ್ಟತ್ತಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡಿದ್ದರು. ಈ ಸಂದರ್ಭ ನಿಯೋಜನೆ ಮೇರೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಚೆನ್ನಾವರ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಮೈ ಸವಣೂರು ಇಲ್ಲಿಯೂ ಕರ್ತವ್ಯ ನಿರ್ವಹಿಸಿದರು. ಕಟ್ಟುತ್ತಾರುವಿನಲ್ಲಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿ, 2023ರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಣಿಯಾರು ಬೈಲಿಗೆ ವರ್ಗಾವಣೆಗೊಂಡರು.
ಇಲ್ಲಿ 3 ವರ್ಷ 8 ದಿನಗಳ ಕಾಲ ಸೇವೆ ಸಲ್ಲಿಸಿರುವ ಇವರು ಒಟ್ಟು 34 ವರ್ಷ 10 ತಿಂಗಳು 29 ದಿನಗಳ ಸುದೀರ್ಘ ಸೇವೆ ಸಲ್ಲಿಸಿರುತ್ತಾರೆ. ಇವರ ಪತ್ನಿ ಶ್ರೀಮತಿ ಶಶಿಕಲಾ ಗೃಹಿಣಿಯಾಗಿದ್ದು, ಹಿರಿಯ ಪುತ್ರ ದೇವಿ ಪ್ರಸಾದ್ ಪಿಜಿ ಸಿವಿಲ್
ಡಿಪ್ಲೊಮಾ ಪಡೆದು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಕಿರಿಯ ಪುತ್ರ ಗುರುಕಿರಣ್ ಪಿಜಿ ಎಲೆಕ್ಟಿಕಲ್ಸ್ ಮತ್ತು ಮೆಕ್ಯಾನಿಕಲ್ ಪದವಿ ಪಡೆದಿದ್ದಾರೆ.







