ಸುಳ್ಯ ಪೊಲೀಸ್ ಠಾಣೆ ಎಎಸೈ ಉದಯಕುಮಾರ್ ಭಟ್ ಸೇವೆಯಿಂದ ನಿವೃತ್ತಿ

0

ಕಳೆದ ಮೂವತ್ತಮೂರು ವರ್ಷಗಳಿಂದ ಸುಳ್ಯ ಪೋಲಿಸ್ ಠಾಣೆ ಸೇರಿ ವಿವಿಧ ಸ್ಥಳಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಎಎಸೈ ಯಾಗಿ ಜೂ.30 ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.
ಇವರು ಕಳೆದ ಮೂವತ್ತೆರಡು ವರ್ಷಗಳ ಹಿಂದೆ ಸುಳ್ಯ ಪೋಲಿಸ್ ಠಾಣೆಯಲ್ಲಿ ವೃತ್ತಿ ಜೀವನ ಆರಂಭಿಸಿದರು.
ಸುಳ್ಯ, ವಿಟ್ಲ,ಉಪ್ಪಿನಂಗಡಿ,ಬಂಟ್ವಾಳ ಟೌನ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಇವರು ಮೂಲತಃ ಪುತ್ತೂರು ತಾಲೂಕು ರಾಮಕುಂಜ ಅತೂರು ನಿವಾಸಿ ಇವರ ಪತ್ನಿ ಅನುರಾಧ ಮತ್ತು ಇಬ್ಬರು ಪುತ್ರರಾದ ಅನ್ವೇಷ್ ,ಆಕಾಶ್ ರೊಂದಿಗೆ ರಾಮಕುಂಜದಲ್ಲಿ ನೆಲೆಸಿದ್ದಾರೆ