ಸುಳ್ಯ : ಇನ್ನರ್ ವೀಲ್ ಕ್ಲಬ್‌ನ ನೂತನ ತಂಡದ ಪದಗ್ರಹಣ ಕಾರ್ಯಕ್ರಮ

0

ಸದೃಢ ಸಮಾಜ ನಿರ್ಮಾಣ ಮಹಿಳೆಯರಿಂದ ಸಾಧ್ಯ: ಡಾ|ವಿದ್ಯಾಶಾರದ

ಇನ್ನರ್ ವೀಲ್ ಕ್ಲಬ್ ಸುಳ್ಯ ಇದರ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜು.1 ರಂದು ರೋಟರಿ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ದಂತ ವೈದ್ಯೆ & ಐಡಿಎ ಸುಳ್ಯ ಶಾಖೆಯ ಅಧ್ಯಕ್ಷೆ ಡಾ. ವಿದ್ಯಾಶಾರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರಿಂದ ಸದೃಢ ಹಾಗೂ ಅರೋಗ್ಯಕರವಾದ ಸಮಾಜ ನಿರ್ಮಾಣ ಸಾಧ್ಯ. ತಾಯಿ ಮಗುವಿಗೆ ಜನ್ಮ ನೀಡುವ ಜೊತೆಗೆ ಪೋಷಣೆ ಮಾಡಿ, ವಿದ್ಯೆ ಕಲಿಸಿ, ಉತ್ತಮ ಮಾರ್ಗದರ್ಶನ ನೀಡಿ, ದೇಶದ ಉತ್ತಮ ಪ್ರಜೆಯಾಗಿ ರೂಪಿಸುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಾಳೆ. ಹಾಗಾಗಿ ಇಂತಹ ಸಂಘ ಸಂಸ್ಥೆಗಳ ಮುಖಾಂತರ ಮಹಿಳೆಯರು ಇನ್ನಷ್ಟು ಬಲಿಷ್ಠರಾಗುತ್ತಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನೂತನ ಅಧ್ಯಕ್ಷೆ ಶ್ರೀಮತಿ ಡಾ. ಪ್ರಜ್ಞಾ ಎಂ.ಆರ್, ಮಾತನಾಡಿ ಮುಂದಿನ ಸಂಘದ ಕಾರ್ಯಗಳಿಗೆ ಎಲ್ಲರ ಸಹಕಾರ ಕೋರಿದರು.ಪ್ರತಿ ವರ್ಷ ಪ್ರಕಟವಾಗುವ ಇನ್ನರ್ ಸ್ಪೂರ್ತಿಯನ್ನು ಈ ಬಾರಿ ಸುಳ್ಯ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷೆ ಲತಾ ಮಧುಸೂದನ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಇದೇ ಸಂದರ್ಭ ಶೈಕ್ಷಣಿಕ ಸಹಕಾರವಾಗಿ ವಿದ್ಯಾರ್ಥಿಗೆ ಬ್ಯಾಗ್ ಸೇರಿದಂತೆ ಪಠ್ಯ ವಸ್ತುಗಳು, ಅಡ್ಕಾರ್ ವನವಾಸಿ ಶಾಲಾ ವಿದ್ಯಾರ್ಥಿಗಳಿಗೆ ಸಹಕಾರ ಹಾಗೂ ರೋಗಿಗೆ ಚಿಕಿತ್ಸ ವೆಚ್ಚದ ಸಹಕಾರವನ್ನು ಸಂಘದಿಂದ ನೀಡಲಾಯಿತು. ಈ ಸಂದರ್ಭ ಇನ್ನರ್‌ವೀಲ್‌ಗೆ ನೂತನ ಸದಸ್ಯೆಯಾಗಿ ಡಾ|ರಾಧಿಕಾ ಪ್ರಿಯದರ್ಶಿನಿ ರವರು ಸೇರ್ಪಡೆಗೊಂಡರು.

ಕಾರ್ಯದರ್ಶಿಯಾಗಿ ಡಾ|ಸ್ಮಿತಾ ಹರ್ಷ, ಕೋಶಾಧಿಕಾರಿ ಶ್ರೀಮತಿ ಉಷಾ ಸಿ.ಶೆಟ್ಟಿ, ಉಪಾಧ್ಯಕ್ಷೆ ಶ್ರೀಮತಿ ನಯನ ಹರಿಪ್ರಸಾದ್, ಐಪಿಪಿ ಡಾ.ಸವಿತಾ ಹೊದ್ದೆಟ್ಟಿ, ಎಡಿಟರ್ ಶ್ರೀಮತಿ ಸುಜಾತ ಕಾಮತ್, ಐಎಸ್‌ಒ ಶ್ರೀಮತಿ ಸೌಮ್ಯ ರವಿಪ್ರಸಾದ್, ಜೊತೆ ಕಾರ್ಯದರ್ಶಿ ಶ್ರೀಮತಿ ವಿಜಯ ಕಸ್ತೂರಿ ಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪದಾಧಿಕಾರಿಗಳಾದ ಶ್ರೀಮತಿ ಮೀನಾಕ್ಷಿ ಹೇಮನಾಥ್, ಶ್ರೀಮತಿ ಜಯಲಲಿತಾ ಸಿ, ಶ್ರೀಮತಿ ಯೋಗಿತಾ ಗೋಪಿನಾಥ್, ಶ್ರೀಮತಿ ಚಿಂತನಾ ಸುಬ್ರಹ್ಮಣ್ಯ ಸೇರಿದಂತೆ ಇನ್ನರ್‌ವೀಲ್ ಸಂಘದ ಸದಸ್ಯರು ಹಾಗೂ ಗಣ್ಯರು ಹಾಜರಿದ್ದರು. ಡಾ.ಸವಿತಾ ಹೊದ್ದೆಟ್ಟಿ ಸ್ವಾಗತಿಸಿ, ನಯನ ಹರಿಪ್ರಸಾದ್ ವಂದಿಸಿ, ಸವಿತಾ ನಾರ್ಕೋಡು ಹಾಗೂ ಶೈಮಾ ಜಿತೇಂದ್ರ ಕಾರ್ಯಕ್ರಮ ನಿರೂಪಿಸಿದರು.