














ದುಗ್ಗಲಡ್ಕ ಪೇಟೆಯಲ್ಲಿ ಹುಚ್ಚುನಾಯಿಯೊಂದು ಸುತ್ತಾಡುತ್ತಿದ್ದು, ಪ್ರೌಢಶಾಲಾ ವಿದ್ಯಾರ್ಥಿಯೋರ್ವನಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಇಂದು ನಡೆದಿದೆ.
ನಗರ,ರಸ್ತೆಗಳಲ್ಲಿ ಬೀದಿ ನಾಯಿ ಮತ್ತು ಹುಚ್ಚುನಾಯಿಗಳ ಕಾಟ ವಿಪರೀತವಾಗಿದ್ದು, ಇಂದು ಬೆಳಿಗ್ಗೆ ಶಾಲೆಗೆ ಬರುತ್ತಿದ್ದ ದುಗ್ಗಲಡ್ಕ ಪ್ರೌಢಶಾಲಾ ವಿದ್ಯಾರ್ಥಿಯೋರ್ವನ ಕಾಲಿಗೆ ಭಜನಾ ಮಂದಿರದ ಬಳಿ ಕಡಿದಿದೆ. ಅವನ್ನು ಶಾಲೆಗೆ ಬಂದು ಅಧ್ಯಾಪಕರಲ್ಲಿ ವಿಷಯ ತಿಳಿಸಿದ್ದು, ಬಳಿಕ ಮನೆಯವರು ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.
ಬೀದಿ ನಾಯಿ ಮತ್ತು ಹುಚ್ಚು ನಾಯಿಗಳ ಕಾಟಕ್ಕೆ ಸ್ಥಳೀಯಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.







