













ಅಜ್ಜಾವರ ಧನಲಕ್ಷ್ಮಿ ಮಹಿಳಾ ಮಂಡಲ (ರಿ) ಇದರ ಮಹಾಸಭೆಯು ದಿನಾಂಕ 05. 07.26 ರ ರವಿವಾರ ದಂದು ಶ್ರೀಮತಿ ಕವಿತಾ ಪುರುಷೋತ್ತಮ ಅವರ ಅಧ್ಯಕ್ಷತೆಯಲ್ಲಿ ನಡೆಯಿತು ಹಾಗೂ 2026-27ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷೆಯಾಗಿ ಶ್ರೀಮತಿ ಕವಿತಾ ಪುರುಷೋತ್ತಮ, ಅಧ್ಯಕ್ಷೆಯಾಗಿ ಶ್ರೀಮತಿ ವಿಮಲಾರುಣ ಪಡ್ಡಂಬೈಲು, ಉಪಾಧ್ಯಕ್ಷೆಯಾಗಿ ಶ್ರೀಮತಿ ಲತಾ ಬೇಲ್ಯ, ಕಾರ್ಯದರ್ಶಿಯಾಗಿ ಶ್ರೀಮತಿ ವನಿತಾ ಸುಬ್ರಹ್ಮಣ್ಯ, ಜಂಟಿ ಕಾರ್ಯದರ್ಶಿಯಾಗಿ ಶ್ರೀಮತಿ ವೇದಾವತಿ ಬಾಲಚಂದ್ರ, ಕೋಶಾಧಿಕಾರಿಯಾಗಿ ಶ್ರೀಮತಿ ರಮ್ಯ ಭವಾನಿ ಶಿರಾಜೆ ಹಾಗೂ ನಿರ್ದೇಶಕರಾಗಿ ಶ್ರೀಮತಿ ಹರಿಣಾಕ್ಷಿ ರೈ ಬೇಲ್ಯ, ಶ್ರೀಮತಿ ಮೋಹಿನಿ ನಾರಾಯಣ ಮತ್ತು ಶ್ರೀಮತಿ ಯಶವಂತಿ ಅವರು ಆಯ್ಕೆಯಾದರು.
ಧನಲಕ್ಷ್ಮಿ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆಯಲ್ಲಿ ಮಹಿಷಮರ್ದಿನಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಭಾಸ್ಕರ ರಾವ್ ಬಯಂಬು, ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶ್ರೀಮತಿ ನಳಿನಾಕ್ಷಿ ಪ್ರಸಾದ್ ಅಡ್ಪಂಗಾಯ ಹಾಗೂ ಧನಲಕ್ಷ್ಮಿ ಮಹಿಳಾ ಮಂಡಲದ ಸ್ಥಾಪಕ ಅಧ್ಯಕ್ಷೆ ಶ್ರೀಮತಿ ಜಯಂತಿ ಜನಾರ್ಧನ ಅಜ್ಜಾವರ ಉಪಸ್ಥಿತರಿದ್ದರು.
ವಾರ್ಷಿಕ ವರದಿಯನ್ನು ಶ್ರೀಮತಿ ಜಯಶ್ರೀ ನಾಗೇಶ್ ಬೇಲ್ಯ, ಲೆಕ್ಕಪತ್ರವನ್ನು ಶ್ರೀಮತಿ ಹರಿಣಾಕ್ಷಿ ಉದಯ ಮೇನಾಲ ಮಂಡಿಸಿದರು. ಪ್ರಾರ್ಥನೆಯನ್ನು ಶ್ರೀಮತಿ ಮೋಹಿನಿ ನಾರಾಯಣ, ಸ್ವಾಗತವನ್ನು ಶ್ರೀಮತಿ ವನಿತಾ ಸುಬ್ರಹ್ಮಣ್ಯ, ಧನ್ಯವಾದವನ್ನು ಶ್ರೀಮತಿ ಜಯಶ್ರೀ ನಾಗೇಶ್ ಬೇಲ್ಯ ಹಾಗೂ ನಿರೂಪಣೆಯನ್ನು ಶ್ರೀಮತಿ ವಿಮಲಾರುಣ ಪಡ್ಡಂಬೈಲು ನೆರವೇರಿಸಿದರು.







