













ಕಳೆದ ಮಂಗಳವಾರ ಹೃದಯಾಘಾತಕ್ಕೊಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ , ನಿಂತಿಕಲ್ ನಲ್ಲಿ ಕ್ಷೌರಿಕ ವೃತ್ತಿಯನ್ನು ನಡೆಸಿಕೊಂಡಿದ್ದ ಕಲ್ಮಡ್ಕ ಗ್ರಾಮದ ಮುಚ್ಚಿಲ ನಿವಾಸಿ ಸುಬ್ರಹ್ಮಣ್ಯರವರು ಇಂದು ಮುಂಜಾನೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು.
ಮಂಗಳವಾರ ಸೆಲೂನ್ ಗೆ ರಜೆ ಇದ್ದುದರಿಂದ ಮನೆಯಲ್ಲಿ ಸಣ್ಣಪುಟ್ಟ ಕೃಷಿ ಕಾರ್ಯದಲ್ಲಿ ನಿರತರಾಗಿದ್ದ ಸುಬ್ರಹ್ಮಣ್ಯರು ಮಧ್ಯಾಹ್ನ ಊಟ ಮಾಡಿದ ಸ್ವಲ್ಪ ಹೊತ್ತಿನ ನಂತರ ತೀವ್ರ ಹೃದಯಾಘಾತಕ್ಕೊಳಗಾದರು. ಇದನ್ನು ಗಮನಿಸಿದ ಅವರ ಪತ್ನಿ ತುಳಸಿಯವರು, ಪಕ್ಕದ ಮನೆಯ ಜುಬೈರ್ ರಲ್ಲಿಗೆ ಹೋಗಿ ವಿಷಯ ತಿಳಿಸಿದರು. ಕೂಡಲೇ ಜುಬೇರ್ ಮತ್ತು ಜಮಾಲ್ ಎಂಬವರು ಕಾರು ತಂದರು. ಅದರಲ್ಲಿ ತುಳಸಿಯವರು ಪತಿಯನ್ನು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಪರೀಕ್ಷೆ ನಡೆಸಿದ ಬಳಿಕ ಬೇರೆ ವಾಹನದಲ್ಲಿ ಸುಬ್ರಹ್ಮಣ್ಯರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದರು.
ಮಂಗಳೂರಿನ ಆಸ್ಪತ್ರೆಯಲ್ಲಿ ಐದು ದಿನಗಳ ಚಿಕಿತ್ಸೆಯ ಬಳಿಕ ಇಂದು ಮುಂಜಾನೆ ಸುಬ್ರಹ್ಮಣ್ಯ ಮುಚ್ಚಿಲರವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಮೃತರು ಪತ್ನಿ ತುಳಸಿ, ಪುತ್ರರಾದ ಕಾರ್ತಿಕ್ ಮತ್ತು ಮನ್ವಿತ್, ತಾಯಿ ಪುಷ್ಪವತಿ, ಅಕ್ಕಂದಿರಾದ ಶ್ರೀಮತಿ ಪೂರ್ಣಿಮಾ ಸೂಂತೋಡು, ಶ್ರೀಮತಿ ಕಮಲ ಜಟ್ಟಿಪಳ್ಳ, ಶ್ರೀಮತಿ ಬೇಬಿ ಮೇಕೇರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.







