ಬೆಳ್ಳಾರೆ: ಮಲೇರಿಯಾ ಹಾಗೂ ಡೆಂಗ್ಯೂ ವಿರೋಧಿ ಮಾಸಚಾರಣೆ ಕಾರ್ಯಾಗಾರ

0

ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆಯಲ್ಲಿ ಮಲೇರಿಯಾ ಹಾಗೂ ಡೆಂಗ್ಯೂ ವಿರೋಧಿ ಮಾಸಚಾರಣೆ ಕಾರ್ಯಾಗಾರ ಜು. 10 ರಂದು ನಡೆಯಿತು.
ಕಾರ್ಯಕ್ರಮಕ್ಕೆ
ಡಾ. ಕಿರಣ್ ರವರು ಚಾಲನೆ ನೀಡಿದರು. ಆಸ್ಪತ್ರೆಯ ಎಲ್ಲಾ ಸಿಬಂಧಿ ವರ್ಗದವರು ಹಾಜರಿದ್ದರು.


ನಂತರ ಕೆ ಪಿ ಎಸ್ ಹೈಸ್ಕೂಲ್ ನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಪ್ರಾಥಮಿಕಆರೋಗ್ಯಸುರಕ್ಷಾಧಿಕಾರಿಯವರಾದ (Srphco) ಮಮತಾ ರೈ ಮತ್ತು ಕಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಯವರಾದ ವಸಂತಿ ಹಾಗೂ ಆರೋಗ್ಯ ನಿರೀಕ್ಷಾಣಾಧಿಕಾರಿಯವರಾದ ಚರಣ್ ಕುಮಾರ್ ಕುಡೆಕಲ್ಲು ರವರು ಹಾಜರಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಆರೋಗ್ಯ ನಿರೀಕ್ಷಾಣಾಧಿಕಾರಿಯವರು ಮಾತನಾಡಿ ಎಲ್ಲಾ ಸಾಂಕ್ರಾಮಿಕ ಕಾಯಿಲೆಗಳಾದ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ, ರೋಗಗಳ ಬಗ್ಗೆ ಸಹ ವಿವರವಾಗಿ ಮಾಹಿತಿ ನೀಡಿದರು.

ಹಾಗೂ ವಿಶೇಷವಾಗಿ ಕುಡಿಯುವ ನೀರಿನ ಮಹತ್ವದ ಬಗ್ಗೆ ಇಲಿ ಜ್ವರದ (leptospiro) ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು. ನಂತರ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯವರು ಮಾತನಾಡಿ HPV Vaccin ಬಗ್ಗೆ ವಿದ್ಯಾರ್ಥಿ ಗಳಿಗೆ ಹದಿಹರಿಯದ ಬಗ್ಗೆ ವೈಯುಕ್ತಿಕ ಶುಚಿತ್ವದ ಬಗ್ಗೆ ಸಹವಿವರವಾಗಿ ಮಾಹಿತಿ ನೀಡಿದರು ಕಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯವರು ಮಾತನಾಡಿ ಪೌಷ್ಟಿಕ ಆಹಾರ ಕುರಿತು ಮತ್ತು ರಕ್ತಹಿನತೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಮನವರಿಕೆ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ಉಪ ಪ್ರಾಂಶುಪಾಲರಾದ ಉಮಾಕುಮಾರಿಯವರು, ಸಹ ಶಿಕ್ಷಕರು ಹಾಜರಿದ್ದರು.