ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ “ಫ್ಯಾಟಿಗ್ಯೂ ಸಿಂಡ್ರೋಮ್” ಕುರಿತು ರಾಷ್ಟ್ರೀಯ ಸಮ್ಮೇಳನ

0

ಸುಳ್ಯದ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ರಜತ ಮಹೋತ್ಸವದ ಅಂಗವಾಗಿ ಶರೀರಶಾಸ್ತ್ರ ವಿಭಾಗದ ವತಿಯಿಂದ “Fatigue Syndrome – A Symptom or a Disease Entity” ಎಂಬ ವಿಷಯದ ಕುರಿತು ಜುಲೈ 10, 11ರಂದು ರಾಷ್ಟ್ರೀಯ ಸಮ್ಮೇಳನ ನಡೆಯಿತು.

ಜುಲೈ 10ರಂದು “From Burnout to Resilience: Deep Insights from Transactional Analysis” ವಿಷಯದ ಕುರಿತು ಪೂರ್ವ-ಸಮ್ಮೇಳನ ಕಾರ್ಯಾಗಾರ ನಡೆಯಿತು. ಚಿತ್ರದುರ್ಗ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ನೇತ್ರರೋಗ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಜಶೇಖರ ಮೆಟ್ರಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಾಗಾರ ನಡೆಸಿಕೊಟ್ಟರು. ಜುಲೈ 11ರಂದು ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮ ನೆರವೇರಿತು. ಎಒಎಲ್ಇ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕೆವಿಜಿಎಂಸಿ & ಎಚ್ ಡೀನ್ ಡಾ. ನೀಲಾಂಬಿಕೈ ನಟರಾಜನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ರಾಷ್ಟ್ರೀಯ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊಫೆಸರ್ ಡಾ. ದಾಮೋದರ್ ಡಿ, ಉಪನ್ಯಾಸ ನೀಡಲಿರುವ ತಜ್ಞರುಗಳಾದ ತ್ರಿಶೂರು ಜುಬಿಲಿ ಮಿಷನ್ ಮೆಡಿಕಲ್ ಕಾಲೇಜಿನ ಶರೀರಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಡಾ. ಬಿಜು ಬಹುಲೆಯನ್, ಮಂಗಳೂರು ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯದ ಜೀವರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ. ಶಿವಶಂಕರ ಎ.ಆರ್, ತಮಿಳುನಾಡಿನ ಸರಕಾರಿ ತಿರುವಾರೂರು ವೈದ್ಯಕೀಯ ಮಹಾವಿದ್ಯಾಲಯದ ಶರೀರಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಜೆ.ಬಿ. ಅಶ್ರಫ್ ಅಲಿ, ಕೆವಿಜಿಎಂಸಿ&ಎಚ್, ಸುಳ್ಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಪ್ರೊಫೆಸರ್ ಡಾ. ಅನಿಲ್ ಬೈಪಡಿತ್ತಾಯ, ಕೆ.ವಿ.ಜಿ.ಎಂ.ಸಿ&ಹೆಚ್ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥೆ ಪ್ರೊ. ಡಾ. ಪೂನಂ ಎಂ ಉಪಸ್ಥಿತರಿದ್ದರು.


ಸಮ್ಮೇಳನದಲ್ಲಿ ಫ್ಯಾಟಿಗ್ಯೂ ಸಿಂಡ್ರೋಮ್ ಮೂಲತತ್ವಗಳು, ಬಯೋಮಾರ್ಕರ್‌ಗಳು, ಕೃತಕ ಬುದ್ಧಿಮತ್ತೆ ಆಧಾರಿತ ಆಯಾಸದ ಮೇಲ್ವಿಚಾರಣೆ, ಪೋಷಣೆ ಹಾಗೂ ಜಲಸೇವನೆ, ಮಾನಸಿಕ ಆರೋಗ್ಯ ಮತ್ತು ಆಯಾಸ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿವಿಧ ರಾಜ್ಯಗಳಿಂದ ಆಗಮಿಸಿದ ವೈದ್ಯಕೀಯ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ಯಾನಲ್ ಚರ್ಚೆ, ರಸಪ್ರಶ್ನೆ, ಹಾಗೂ ಮೌಖಿಕ ಹಾಗೂ ಇ-ಪೋಸ್ಟರ್ ಪ್ರಸ್ತುತಿಗಳೂ ನಡೆಯಿತು. ಉಪನ್ಯಾಸಕರಾದ ರಕ್ಷಿತಾ ರಮೇಶ್ ಪ್ರಾರ್ಥಿಸಿದರು, ಡಾ. ದಾಮೋದರ್ ಡಿ ಪ್ರಾಸ್ತಾವಿಕವಾಗಿ ಮಾತುಗಳೊಂದಿಗೆ ಸ್ವಾಗತಿಸಿ, ರಕ್ಷತಾ ರಮೇಶ್ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ವೈದ್ಯಕೀಯ ತಜ್ನರು, ಪ್ರಾಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಕಲಿಕಾ ವೈದ್ಯರು ಬೋಧಕ-ಬೊಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು