ಬ್ಲೆಸ್ಡ್ ಕುರಿಯಕೋಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಗುತ್ತಿಗಾರಿನಲ್ಲಿ ಶಾಲಾ ಸಂಸತ್ತಿನ ಪ್ರತಿಜ್ಞಾವಿಧಿ ಕಾರ್ಯಕ್ರಮ

0

ಗುತ್ತಿಗಾರಿನಲ್ಲಿ ಬ್ಲೆಸ್ಡ್ ಕುರಿಯಕೋಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2026–27ನೇ ಸಾಲಿನ ಶಾಲಾ ಸಂಸತ್ತಿನ ಪ್ರತಿಜ್ಞಾವಿಧಿ ಕಾರ್ಯಕ್ರಮವು ಜು. 11 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರಾಜೇಶ್ ಮಾವಿನಕಟ್ಟೆ ಅವರು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಟ್ರೀಸಾ ಜಾನ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ನಾಯಕಿಯಾಗಿ ಸನಾ ಮರಿಯಾ ಪಿ. ಎಸ್, ಉಪನಾಯಕನಾಗಿ ಹರ್ಷಲ್ ಪಿ. ವಿ, ಶಿಸ್ತು ನಾಯಕನಾಗಿ ಗುರುಕಿರಣ್, ಶಿಸ್ತು ಉಪನಾಯಕಿ ಯಾಗಿ ಜ್ಯೋತ್ಸ್ನಾ, ಸಾಂಸ್ಕೃತಿಕ ನಾಯಕಿಯಾಗಿ ಜ್ಯುವೆಲ್ ಜೈಮಿ , ಸಾಂಸ್ಕೃತಿಕ ಉಪನಾಯಕಿಯಾಗಿ ವಂಶಿ, ಕ್ರೀಡಾ ನಾಯಕಿಯಾಗಿ ರಚಿತಾ ಕೆ ಜೆ , ಕ್ರೀಡಾ ಉಪನಾಯಕನಾಗಿ ದಿತೇಶ್, ಸಂವಹನ ಮತ್ತು ಮಾಧ್ಯಮ ನಾಯಕನಾಗಿ ಗುರುಪ್ರಸಾದ್ ಸಂವಹನ ಮತ್ತು ಮಾಧ್ಯಮ ಉಪನಾಯಕನಾಗಿ ಲವಿಶ್, ಆರೋಗ್ಯ ನಾಯಕನಾಗಿ ಶ್ರೇಯಸ್ , ಆರೋಗ್ಯ ಉಪನಾಯಕಿಯಾಗಿ ಅಶ್ಮಿತ ಮಲ್ಲಾರ ಹಾಗೂ ವಿರೋಧ ಪಕ್ಷದ ನಾಯಕನಾಗಿ ಆದಿತ್ಯ ಎಸ್.ಪಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಮುಖ್ಯೋಪಾಧ್ಯಾಯರು ಅವರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ನಂತರ ನೂತನ ಪದಾಧಿಕಾರಿಗಳಿಗೆ ಬ್ಯಾಡ್ಜ್‌ಗಳನ್ನು ಧರಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.