ನಿಯಮ ಪಾಲಿಸದಿದ್ದಲ್ಲಿ ಬೀಳಲಿದೆ ಪೆನಾಲ್ಟಿ















ಗುತ್ತಿಗಾರು ಪೇಟೆಯಲ್ಲಿ ರಸ್ತೆ ಬದಿ ವಾಹನ ಪಾರ್ಕಿಂಗ್ ಮಾಡುವವರಿಗೆ ಗುತ್ತಿಗಾರು ಗ್ರಾ.ಪಂ ವತಿಯಿಂದ ಕೆಲ ಸೂಚನೆಗಳನ್ನು ನೀಡಲಾಗಿದ್ದು ಈ ನಿಯಮ ಪಾಲಿಸದಿದ್ದಲ್ಲಿ ದಂಡ ಹಾಕಲಾಗುವುದು ಎಂದು ಗುತ್ತಿಗಾರು ಗ್ರಾ.ಪಂ. ನ ಆಡಳಿತಾಧಿಕಾರಿ ದೇವರಾಜ ಮುತ್ಲಾಜೆ ತಿಳಿಸಿದ್ದಾರೆ.
ಗುತ್ತಿಗಾರು ಪೇಟೆಯ ಇಕ್ಕೆಲಗಳಲ್ಲಿ ರಸ್ತೆ ಬದಿ ಕೆಲ ವ್ಯಕ್ತಿಗಳು ವಾಹನ ಪಾರ್ಕಿಂಗ್ ಮಾಡುತ್ತಿರುವುದು ಕಂಡುಬಂದಿದ್ದು ಇನ್ನು ಮುಂದಿನ ದಿನಗಳಲ್ಲಿ 10 ನಿಮಿಷಗಳಿಂದ ಹೆಚ್ಚು ಸಮಯ ರಸ್ತೆ ಬದಿ ವಾಹನ ಪಾರ್ಕಿಂಗ್ ಮಾಡುವಂತಿಲ್ಲ ಹಾಗೇನಾದರೂ ವಾಹನ ಪಾರ್ಕಿಂಗ್ ಮಾಡಲೇಬೇಕಾಗಿದ್ದಲ್ಲಿ ಗುತ್ತಿಗಾರು ಗ್ರಾ.ಪಂ ವ್ಯಾಪ್ತಿಯಲ್ಲಿ ಸಾಕಷ್ಟು ಜಾಗವಿದ್ದು ಉಚಿತವಾಗಿ ವಾಹನ ಪಾರ್ಕಿಂಗ್ ಮಾಡಿ ತೆರಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ವಿಶೇಷವಾಗಿ ಗುತ್ತಿಗಾರಿನಲ್ಲಿ ಕಾರ್ಯಾಚರಿಸುತ್ತಿರುವ ಶಾಲಾ ಕಾಲೇಜುಗಳ ವ್ಯಾಪ್ತಿಯ ರಸ್ತೆಗಳ ಬಳಿ ಶಾಲಾ ಮಕ್ಕಳು ಶಾಲೆಗೆ ಬರುವ ಸಮಯ ಮತ್ತು ಸಂಜೆ ವೇಳೆ ಶಾಲಾವಧಿ ಮುಗಿಯುವ ಸನಯ ಮಕ್ಕಳ ಸಂಚಾರಕ್ಕೆ ತೊಂದರೆ ಆಗುವಂತೆ ಶಾಲೆಗಳ ಆಸುಪಾಸಿನಲ್ಲಿ ವಾಹನ ಪಾರ್ಕಿಂಗ್ ಮಾಡದಂತೆ ಸೂಚನೆ ನೀಡಲಾಗಿದೆ. ಎಲ್ಲಾ ನಿಯಮಗಳನ್ನು ವಾಹನ ಸವಾರರು ಪಾಲಿಸದೆ ಇದ್ದಲ್ಲಿ ಸಿಸಿ ಕ್ಯಾಮೆರಾ ಮುಖಾಂತರ ನಿಯಮ ಮೀರಿದ ವಾಹನವನ್ನು ಗುರುತಿಸಿ ಅದರ ಮಾಲಕರಿಗೆ ಪೆನಾಲ್ಟಿ (ದಂಡ) ವಿಧಿಸಲಾಗುವುದು ಎಂದು ಗ್ರಾಮ ಪಂಚಾಯತ್ ನ ನಿರ್ಣಯ ಉಲ್ಲೇಖಿ ತಿಳಿಸಿದ್ದಾರೆ.






