ಚೆಂಬು ಗ್ರಾಮದ ಊರುಬೈಲು ಪರಿಸರದಲ್ಲಿ ಆನೆಗಳ ಹಿಂಡು ಕಳೆದ ಒಂದು ವಾರದಿಂದ ಕೃಷಿ ತೋಟಕ್ಕೆ ದಾಳಿ ನಡೆಸಿ ಅಪಾರ ಹಾನಿ ಮಾಡಿದ ಬಗ್ಗೆ ವರದಿಯಾಗಿದೆ.














ಊರುಬೈಲು ಲೀಲಾವತಿ ಜಯಪ್ರಕಾಶ್ರವರ ತೋಟಕ್ಕೆ ಕಳೆದ ಒಂದು ವಾರಗಳಿಂದ ಸುಮಾರು ೯ ಆನೆಗಳ ಹಿಂಡು ದಾಳಿ ಮಾಡಿ ಕೃಷಿಗೆ ಅಪಾರ ಹಾನಿ ಮಾಡಿದ್ದು, ಇಂದು ಬೆಳಿಗ್ಗೆ ಆನೆಗಳ ಹಿಂಡನ್ನು ಮಡಿಕೇರಿಯಿಂದ ಆಗಮಿಸಿದ ಸುಮಾರು ೨೦ ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿದ್ದ ತಂಡ ಪಟಾಕಿ ಸಿಡಿಸಿ ಅವುಗಳನ್ನು ಬೆನ್ನಟ್ಟಿರುವುದಾಗಿ ತಿಳಿದುಬಂದಿದೆ.

ಲೀಲಾವತಿ ಜಯಪ್ರಕಾಶ್ರವರ ತೋಟದ ಸಮೀಪ ಇರುವ ಹಲವು ಮಂದಿಯ ತೋಟಕ್ಕೂ ಆನೆಗಳು ದಾಳಿ ಮಾಡಿ ಅಪಾರ ಹಾನಿ ಮಾಡಿರುವುದಾಗಿ ತಿಳಿದುಬಂದಿದೆ.








