ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖ
ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಬಂದ ಕಾರಣ ಚಿಕಿತ್ಸೆ ಫಲಕಾರಿಯಾಗಿದೆ: ಡಾ. ಶಿವಕುಮಾರ್














ವಾರದ ಹಿಂದೆ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ವ್ಯಕ್ತಿಗೆ ನಾಗರಹಾವು ಕಚ್ಚಿ ಗಂಭೀರಗೊಂಡು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಇದೀಗ ಅವರು ಚಿಕಿತ್ಸೆ ಫಲಕಾರಿಯಾಗಿ ಆಸ್ಪತ್ರೆಯಿಂದ ಮನೆಗೆ ತೆರೆಳಿದ್ದಾರೆ.
ಅರಂತೋಡು ನಿವಾಸಿ ಯತೀಶ ಎಂಬುವವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಪೊದೆಯಲ್ಲಿ ಅಡಗಿದ್ದ ನಾಗರಹಾವು ಇವರ ಕೈಗೆ ಕಚ್ಚಿದ್ದು ಸ್ಥಳೀಯರು ಕೂಡಲೇ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ. ಒಂದು ವಾರ ಕಾಲ ತುರ್ತು ಘಟಕ ವಿಭಾಗದಲ್ಲಿ ಚಿಕಿತ್ಸೆ ಪಡೆದ ಇವರು ಗುಣಮುಖರಾಗಿ ಜುಲೈ 15 ರಂದು ತಮ್ಮ ಮನೆಗೆ ತೆರೆಳಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಸುಳ್ಯ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಶಿವಕುಮಾರ್ ರವರು ಇಂತಹ ಘಟನೆಗಳು ಸಂಭವಿಸಿದರೆ ಬೇರೆ ಬೇರೆ ಹಳ್ಳಿ ಮದ್ದು ಅಥವಾ ಬೇರೆ ಯಾವುದೋ ಒಂದು ಮದ್ದಿಗೆ ಓಡದೆ ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದಲ್ಲಿ ಹಾವು ಕಡಿತಕ್ಕೊಳಗಾದ ವ್ಯಕ್ತಿಯನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಇವರು ಕೂಡ ಗೋಲ್ಡನ್ ಹವರ್ ನಲ್ಲಿ ಬಂದು ಆಸ್ಪತ್ರೆಗೆ ದಾಖಲಾದ ಕಾರಣ ಇವರಿಗೆ ನೀಡಿರುವ ಚಿಕಿತ್ಸೆ ಸ್ಪಂದನೆ ಸಿಕ್ಕಿದೆ ಎಂದು ಹೇಳಿಸಿದ್ದಾರೆ.







