













ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದ ಕುಶಾಲಪ್ಪ ಬಡ್ಡಕೋಟಿಯವರು ಜೂ. 30ರಂದು ವಯೋನಿವೃತ್ತಿ ಹೊಂದಿದ್ದಾರೆ.
1987ರ ಆಗಷ್ಟ್ 14ರಂದು ಸೇವೆಗೆ ಸೇರ್ಪಡೆಗೊಂಡ ಇವರು ಸುಮಾರು 39 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಇವರ ಪತ್ನಿ ಶ್ರೀಮತಿ ವೀಣಾ ಟೈಲರಿಂಗ್ ವೃತ್ತಿ ಮಾಡುತ್ತಿದ್ದಾರೆ. ಪುತ್ರ ಪ್ರತೀಕ್ ಬಿ.ಕೆ ಮಂಗಳೂರಿನ ಎನೆಪೊಯ ವಿದ್ಯಾಸಂಸ್ಥೆಯಲ್ಲಿ ಎಂ.ಎಸ್.ಸಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಪುತ್ರಿ ಕು. ಪೃಥ್ವಿ ಜೆಡಕಲ್ಲು ಸರಕಾರಿ ಪ್ರ.ದ. ಕಾಲೇಜಿನಲ್ಲಿ ಬಿ.ಸಿ.ಎ. ಪದವಿ ವ್ಯಾಸಂಗ ಮಾಡುತ್ತಿದ್ದಾರೆ.







