ಅಂತರ್ ಜಿಲ್ಲಾ ಮಟ್ಟದ ಪತ್ರ ಲೇಖನ ಸ್ಪರ್ಧೆಯಲ್ಲಿ ಸಾವಿತ್ರಿ ಧರ್ಮಪಾಲ ಮಾವಜಿಯವರಿಗೆ ಪ್ರಥಮ ಬಹುಮಾನ

0

ಮುಕ್ಕೂರು ನೇಸರ ಯುವಕ ಮಂಡಲ ಹಾಗೂ ಯುವತಿ ಮಂಡಲ ಇವುಗಳ ಜಂಟಿ ಆಶ್ರಯದಲ್ಲಿ ‘ಅಮ್ಮನಿಗೊಂದು ಮಗಳ ಪತ್ರ’ ಎಂಬ ಶೀರ್ಷಿಕೆಯಡಿ ಆಯೋಜಿಸಲಾದ ಅಂತರ್ ಜಿಲ್ಲಾ ಮಟ್ಟದ ಪತ್ರ ಲೇಖನ ಸ್ಪರ್ಧೆಯಲ್ಲಿ ಸುಳ್ಯದ ದೇವಸ್ಯ ನಿವಾಸಿ ಶ್ರೀಮತಿ ಸಾವಿತ್ರಿ ಧರ್ಮಪಾಲ ಮಾವಜಿಯವರು ಪ್ರಥಮ ಬಹುಮಾನ ಪಡೆದಿದ್ದಾರೆ.

ಇವರು ಕರ್ನಾಟಕ ರಾಜ್ಯ ಕಾರ್ಮಿಕ ವಿಮಾ ಇಲಾಖೆ
ಪುತ್ತೂರಿನ ಕಚೇರಿಯಲ್ಲಿ ಶುಶ್ರೂಷ ಅಧಿಕಾರಿಯಾಗಿದ್ದು,
ಈ ಹಿಂದೆಯೂ ತಾಲೂಕು ಹಾಗೂ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳಿಗೆ ಭಾಜನರಾಗಿದ್ದರು.