













ಅಧಿವಕ್ತ ಪರಿಷತ್ ಸುಳ್ಯ ಘಟಕದ ವತಿಯಿಂದ ಗುರು ಪೂರ್ಣಿಮೆಯ ಪ್ರಯುಕ್ತ ಜು.31ರಂದು ಹಿರಿಯ ವಕೀಲರಾದ ಕುಂಜಾಡಿ ರವೀಂದ್ರನಾಥ ರೈ ಯವರಿಗೆ ಅವರ ಕಚೇರಿಯಲ್ಲಿ ಗುರುವಂದನೆಯನ್ನು ಸಲ್ಲಿಸಲಾಯಿತು.
ಅಧಿವಕ್ತ ಪರಿಷತ್ ಸುಳ್ಯ ಘಟಕ ಇದರ ಅಧ್ಯಕ್ಷರಾದ ದಿಲೀಪ್ ಬಾಬು ಬೆಟ್ಟು ಇವರು ಸ್ವಾಗತಿಸಿ, ಸುಳ್ಯ ವಕೀಲರ ಸಂಘದ ಅಧ್ಯಕ್ಷರಾದ ಸುಕುಮಾರ್ ಕೋಡ್ತುಗುಳಿಯವರು ಕುಂಜಾಡಿ ರವೀಂದ್ರನಾಥ ರೈ ಅವರನ್ನು ಸನ್ಮಾನಿಸಿ ಅಭಿನಂದನಾ ಭಾಷಣವನ್ನು ಮಾಡಿದರು, ಅಧಿವಕ್ತ ಪರಿಷತ್ ಇದರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯವರಾದ ಜಗದೀಶ್.ಡಿ.ಪಿ ಉಪಸ್ಥಿತರಿದ್ದರು. ಸುಳ್ಯ ವಕೀಲರ ಸಂಘದ ಹಿರಿಯ ಕಿರಿಯ ವಕೀಲ ಮಿತ್ರರು ಗುರುವಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಧಿವಕ್ತ ಪರಿಷತ್ತು ಸುಳ್ಯ ಘಟಕದ ಪ್ರಧಾನ ಕಾರ್ಯದರ್ಶಿ ಯವರಾದ ರಂಜಿತ್ ಕುಕ್ಕೇಟಿ ವಂದನಾರ್ಪಣೆಯನ್ನು ನೇರವೇರಿಸಿದರು.







