ತಂದೆಯ ನೆನಪಿಗಾಗಿ ವಿದ್ಯೆಗೆ ಪೂರಕವಾದ ಕೊಡುಗೆಯನ್ನು ನೀಡಿ ಮಾದರಿಯಾದ ಜಿ.ಎ ಕುಟುಂಬ: ಖಾಮಿಲ್ ಸಖಾಫಿ














ಸುಳ್ಯ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದರಸದಲ್ಲಿ ವಿದ್ಯಾರ್ಥಿಗಳಿಗೆ ಅಧುನಿಕ ಶೈಲಿಗೆ ಅನುಗುಣವಾಗಿ ವಿದ್ಯೆಯನ್ನು ಕಲಿಯುವ ನಿಟ್ಟಿನಲ್ಲಿ ಸ್ಮಾರ್ಟ್ ಕ್ಲಾಸ್ ನ ಅವಶ್ಯಕತೆಯನ್ನು ಮನಗಂಡು ಜಿ.ಎ ಕುಟುಂಬಸ್ಥರು ಸ್ಮಾರ್ಟ್ ಕ್ಲಾಸ್ ನಿರ್ಮಿಸಿ ಅದಕ್ಕೆ ಪೀಠೋಪಕರಣಗಳು ಟಿ.ವಿ ಎಲ್ಲವನ್ನೂ ಜೊಡಿಸಿ ಜಿ.ಎ ಕುಟುಂಬದ ಸದಸ್ಯರ ತಂದೆಯವರಾದ ದಿ.ಕೆ.ಪಿ ಅಬ್ದುಲ್ ಖಾದರ್ ಹಾಜಿ ಗಾಳಿಮುಖ ಅವರ ಸ್ಮರಣಾರ್ಥ ಸ್ಮಾರ್ಟ್ ಕ್ಲಾಸ್ ನಿರ್ಮಿಸಿ ಕೊಟ್ಟರು. ಇದರ ಉದ್ಘಾಟನ ಸಮಾರಂಭ ಖತಮ್ಮುಲ್ ಖುರಾನ್ ಪಾರಾಯಣದ ಮೂಲಕ ನೆರವೇರಿತು.
ಗಾಂಧಿನಗರ ಜುಮ್ಮಾ ಮಸೀದಿಯ ಖತೀಬರಾದ ಅಶ್ರಫ್ ಕಾಮಿಲ್ ಸಖಾಫಿ ಮಾತನಾಡಿ ಜಿ.ಎ ಕುಟುಂಬಸ್ಥರು ಅಗಲಿದ ತಮ್ಮ ತಂದೆಯ ನೆನಪಿಗಾಗಿ ವಿದ್ಯೆ ಕಲಿಯುವ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಮೂಲಕ ವಿದ್ಯೆಯನ್ನು ಇನ್ನಷ್ಟು ವೇಗವಾಗಿ ಕಲಿಯಲು ಅವಕಾಶ ಮಾಡಿಕೊಟ್ಟು ಮೃತಪಟ್ಟ ಕುಟುಂಬದ ಮಾರ್ಗದರ್ಶಕರನ್ನು ನೆನಪಿಸುವಂತ ಮಹತ್ ಕಾರ್ಯವನ್ನು ಮಾಡಿದ್ದಿರಿ ನಿಜಕ್ಕೂ ಇತಂಹ ಕೆಲಸ ಸಮಾಜಕ್ಕೆ ಮಾದರಿಯಾಗಲಿ ಎಂದವರು ಸ್ಮಾರ್ಟ್ ನೀಡಿದ ಕುಟುಂಬಸ್ಥರಿಗಾಗಿ ವಿಶೇಷವಾಗಿ ಪಾರ್ಥಿಸಿದರು.
ಮದರಸ ಶೈಕ್ಷಣಿಕ ಪ್ರಗತಿ ಪರೀಕ್ಷಕರಾದ ಮುಪತ್ತಿಶ್ ಗಾಂಧಿನಗರ ಮಸೀದಿ ಮುದರಿಸ್ ಮುಬಶ್ಶೀರ್ ಅಹ್ಸನಿ,ಮುಹದ್ದೀನ್ ಶಾಮಿಲ್ ಪಾಳಿಲಿ,ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್, ಉಪಾಧ್ಯಕ್ಷ ಅಬ್ದುಲ್ ಹಮೀದ್ ಬೀಜದಕಟ್ಟೆ,ಪ್ರಧಾನ ಕಾರ್ಯದರ್ಶಿ ಹಾಜಿ ಐ ಇಸ್ಮಾಯಿಲ್, ಕೋಶಾಧಿಕಾರಿ ಅಬ್ದುಲ್ ಹಮೀದ್ ಎಸ್ ಎಂ ನಿರ್ದೇಶಕರಾದ ಉಮ್ಮರ್ ಕೆ ಎಸ್,ಯಾಕುಬ್ ಹಾಜಿ ಎಸ್ ಟಿ,ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್,ಉಪಾಧ್ಯಕ್ಷ ಕೆ ಬಿ ಇಬ್ರಾಹಿಂ, ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ,ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಜನತಾ,ಕರ್ನಾಟಕ ರಾಜ್ಯ ಸರ್ಕಾರದ ಕೆಪೆಕ್ ಮಾಜಿ ನಿರ್ದೆಶಕ ಹಾಜಿ ಪಿ ಎ ಮಹಮ್ಮದ್ ಮತ್ತು ಜಿ.ಎ ಕುಟುಂಬದ ಹಿತೈಷಿಗಳು ಉಪಸ್ಥಿತರಿದ್ದರು.
ಜಿ.ಎ ಕುಟುಂಬ ಸದಸ್ಯರಾದ ಮರ್ಹೂಂ ಕೆ.ಪಿ ಅಬ್ದುಲ್ ಖಾದರ್ ಹಾಜಿ ಮಕ್ಕಳಾದ ಜಿ.ಎ ಮಹಮ್ಮದ್ ಸಹನ ಶಾಮಿಯಾನ, ಅನಿವಾಸಿ ಉದ್ಯಮಿಗಳಾದ ಜಿ.ಎ ರಿಯಾಜ್ ,ಜಿ.ಎ ರಫೀಕ್,ಜಿ.ಎ ಸಿದ್ದೀಕ್ ಹಾಗೂ ಸಹೋದರಿಯರು ತಮ್ಮ ತಂದೆಯ ಸ್ಮರಣಾರ್ಥ ಸ್ಮಾರ್ಟ್ ನಿರ್ಮಿಸಿ ಕೊಡುವಲ್ಲಿ ಸಂಪೂರ್ಣ ಸಹಕರಿಸಿದರು.
ಜಿ.ಎ ಕುಟುಂಬದ ಪರವಾಗಿ ಕಾರ್ಯಕ್ರಮ ಕೊನೆಯಲ್ಲ ಅಗಮಿಸಿದ ಸರ್ವರಿಗೂ ಅನ್ನದಾನ ಮಾಡಲಾಯಿತು.







