ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ-ಭಕ್ತರಿಂದ ತುಲಾಭಾರ ಸೇವೆ- ಗುರುವಂದನಾ ಕಾರ್ಯಕ್ರಮ

0

ಗ್ರಾಮೋತ್ಸವದ ಸಮಾರಂಭದಲ್ಲಿ
ಡಾ.ಆರ್ .ಕೆ.ನಾಯರ್ ರವರಿಗೆ ಗೌರವಾಭಿನಂದನೆ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವವನ್ನು ಗ್ರಾಮೋತ್ಸವವಾಗಿ ಗುರುವಂದನೆ ಸೇವಾ ಸಂಭ್ರಮದೊಂದಿಗೆ
ಆ. 08 ರಂದು ಆಚರಿಸಲಾಯಿತು.

ಒಡಿಯೂರು ಶ್ರೀ ಗಳ‌ ಜನ್ಮದಿನೋತ್ಸವ ಸಮಿತಿಯ ಆಯೋಜನೆಯಲ್ಲಿ ಕಾರ್ಯಕ್ರಮದ ಆಯೋಜನೆ ಮಾಡಲಾಗಿದ್ದು ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ ಮಹಾಪೂಜೆಯು ನಡೆಯಿತು.
ರವಿರಾಜ್ ಒಡಿಯೂರು ಮತ್ತು ಬಳಗದವರಿಂದ ಭಜನಾ ನಾಮ ಸಂಕೀರ್ತನೆಯು ಬೆಳಗ್ಗೆ ನಡೆಯಿತು.
ಪೂರ್ವಾಹ್ನ ಸ್ವಾಮೀಜಿಯವರ ಪಾದ ಪೂಜೆಯಾಗಿ ಮತ್ತು ತುಲಾಭಾರ ಸೇವೆ ಹಾಗೂ ಗುರುವಂದನಾ ಕಾರ್ಯಕ್ರಮದ ಸಮಾರಂಭವು ನಡೆಯಿತು.
ಸಮಾರಂಭದಲ್ಲಿ
ಒಡಿಯೂರು ಕ್ಷೇತ್ರದ
ಶ್ರೀ ಗುರುದೇವಾನಂದ ಸ್ವಾಮೀಜಿಯವರು ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು. ವೇದಿಕೆಯಲ್ಲಿ ಸಾಧ್ವಿ ಶ್ರೀ ಮಾತಾನಂದಮಯಿ ಯವರ ದಿವ್ಯ ಉಪಸ್ಥಿತಿ ಹಾಗೂಮಾರ್ಗದರ್ಶನದಲ್ಲಿ ಸ್ವಾಮೀಜಿಯವರಿಗೆ ಗೋಡಂಬಿ, ಕಲ್ಲುಸಕ್ಕರೆ,ಏಲಕ್ಕಿ ಮತ್ತು ಹರಸಿನ ಕೊಂಬಿನೊಂದಿಗೆ ಭಕ್ತರಿಂದ ತುಲಾಭಾರ ಸೇವೆಯು ನಡೆಯಿತು. ನೂರಾರು ಭಕ್ತರು ಸೇವಾ ರೂಪದಲ್ಲಿ ತುಲಾಭಾರ ಸೇವೆಯಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕ್ಯಾ| ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಯು, ಬೆಂಗಳೂರು ಎಂ.ಆರ್.ಜಿ ಗ್ರೂಪ್ಸ್ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ,ಶಬರಿಇಂಡಸ್ಟ್ರೀಯಲ್ ಕ್ಯಾಟರಿಂಗ್ ಇದರ ಆಡಳಿತ ನಿರ್ದೇಶಕ ಕೆ.ಕೆ.ಶೆಟ್ಟಿ, ಉದ್ಯಮಿ ರಘು ಎಲ್. ಶೆಟ್ಟಿ ದೇವಸ್ಯ ಮುಂಬೈ, ಮುಂಬಯಿ ಬಂಟ್ಸ್ಅಸೋಸಿಯೇಷನ್ ಮಾಜಿ ಅಧ್ಯಕ್ಷ ಶ್ಯಾಮ್ ಎನ್.ಶೆಟ್ಟಿ, ಉದ್ಯಮಿ ಭಾಸ್ಕರ ಆರ್. ಶೆಟ್ಟಿ ನವಿ ಮುಂಬೈ, ಹಿರಿಯ ವಕೀಲರಾದ ಒ.ಶ್ಯಾಮ್ ಭಟ್, ಎ.ಟಿ.ಎಸ್ ಆಡಳಿತ ನಿರ್ದೇಶಕ ಡಾ.ರವಿ ಶೆಟ್ಟಿ ಮೂಡಂಬೈಲ್ -ದೋಹ ಕತ್ತಾರ್, ಪ್ರಗತಿಪರ ಕೃಷಿಕರಾದ ಶ್ಯಾಮ್ ಪ್ರಸಾದ್ ಕೊಣಲೆ, ಮಾಜಿ ಶಾಸಕರಾದ ಕೆ.ಪದ್ಮನಾಭ ಕೊಟ್ಟಾರಿ, ಅಧ್ಯಕ್ಷ ಲೋಕನಾಥ್ ಜಿ. ಶೆಟ್ಟಿ, ಮಹಾರಾಷ್ಟ್ರ ಸಮಿತಿ ಅಧ್ಯಕ್ಷ ರಾದ ವಾಮಯ್ಯ ಬಿ.ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷರಾದ
ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಈ ಸಂದರ್ಭದಲ್ಲಿ ಸುಳ್ಯದವರಾಗಿರುವ ಗ್ರಿನ್ ಹೀರೋ ಆಫ್ ಇಂಡಿಯಾ ಗುಜರಾತ್ ನಲ್ಲಿ ಉದ್ಯಮಿಯಾಗಿರುವ ಡಾ.ಆರ್ ಕೆ.ನಾಯರ್ ರವರಿಗೆ ಪರಿಸರ ಯೋಧ ಎಂಬ ಬಿರುದು ನೀಡಿ ಸ್ವಾಮೀಜಿಯವರು ಗೌರವಿಸಿಅಭಿನಂದಿಸಿದರು.
ಸ್ವಾಮೀಜಿಯವರ ಜನ್ಮ ದಿನೋತ್ಸವದ ಅಂಗವಾಗಿ ಸಮಾಜ ಸೇವೆಯ ಬಾಬ್ತು ಸಾಂಕೇತಿಕವಾಗಿ ಮಾಜಿ ಸೈನಿಕ ಸಂಘದ ಕಟ್ಟಡ ನಿರ್ಮಾಣಕ್ಕೆ ಹಾಗೂ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸೇರಿದಂತೆ ಸುಮಾರು 150 ಕ್ಕೂ ಮಿಕ್ಕಿ ಸಂಘ ಸಂಸ್ಥೆಗಳಿಗೆ ಮತ್ತು ‌ಅಶಕ್ತರಿಗೆ ಮನೆ ನಿರ್ಮಾಣ ಕಾರ್ಯಕ್ಕೆ, ಅನಾರೋಗ್ಯ ಪೀಡಿತ ಬಡ ಕುಟುಂಬಕ್ಕೆ ಸಹಕಾರ ನೀಡುವುದಾಗಿ ಘೋಷಿಸಿದರು.

ಅಪರಾಹ್ನ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಆಗಮಿಸಿದ ಭಕ್ತಾದಿಗಳಿಗೆ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನ ಅನ್ನ ಪ್ರಸಾದ ವಿತರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.
ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸಂಘದ ಸದಸ್ಯರು, ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಸದಸ್ಯರು ಹಾಗೂ ಜನ್ಮ ದಿನೋತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು,ಗುರುದೇದತ್ತ ಸಂಸ್ಥಾನದ ಸಂಸ್ಥೆಗಳ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು.