













ಕಲ್ಲುಗುಂಡಿ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ 80 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15 ರಂದು ಆಚರಿಸಲಾಯಿತು.
ಮಸೀದಿ ಆಡಳಿತ ಕಮಿಟಿ ಮಂಡಳಿಯ ಅಧ್ಯಕ್ಷರಾದ ಎಸ್ ಆಲಿ ಹಾಜಿ ಅವರು ಧ್ವಜಾರೋಹಣ ನೆರವೇರಿಸಿದರು. ಮಸೀದಿಯ ಖತೀಬ್ ರಾದ ನಾಸಿರ್ ದಾರಿಮಿ ಸ್ವಾತಂತ್ರೋತ್ಸವದ ಮಹತ್ವದ ಬಗ್ಗೆ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಜಮಾತ್ ಆಡಳಿತ ಕಮಿಟಿಯ ಸದಸ್ಯರು, ಸಿರಾಜುಲ್ ಇಸ್ಲಾಂ ಎಸೋಸಿಯೇಷನ್ ಕಮಿಟಿಯ ಸದಸ್ಯರು, ಸಿ ಎಫ್ ಸಿ ಕಮಿಟಿಯ ಸದಸ್ಯರು, ಸಿಡಬ್ಲ್ಯೂಎಫ್ ಕಮಿಟಿಯ ಸದಸ್ಯರು. ಜಮಾತ್ ಬಾಂಧವರು ಮತ್ತು ಮದರಸ ಮಕ್ಕಳು ಭಾಗವಹಿಸಿದರು. ಜಲಾಲುದ್ದೀನ್ ಯಮಾನಿ ಕಾರ್ಯಕ್ರಮವನ್ನು ರೂಪಿಸಿದರು. ಕೊನೆಯಲ್ಲಿ ಎಲ್ಲರಿಗೂ ಸಿಹಿ ತಿಂಡಿ ವಿತರಿಸಿ ದುವಾ ದೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.







