














ಕೆ.ವಿ.ಜಿ. ಕಾನೂನು ಕಾಲೇಜಿನಲ್ಲಿ ಆ.15 ರಂದು 80ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಅಕಾಡೆಮಿ ಆಫ್ ಲಿಬರಲ್ಎಜ್ಯುಕೇಶನ್ (ರಿ.) ಸುಳ್ಯ, ಇದರ ಆಡಳಿತ ಸದಸ್ಯ ಶ್ರಿ ಎ. ಎಚ್ ಜಗದೀಶ ಅಡ್ತಲೆರವರು ಧ್ವಜಾರೋಹಣ ಮಾಡಿದರು. ಕಾನೂನು ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಕೆ ವಿ ದಾಮೋದರ ಗೌಡ ಇವರು ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿ, ಇಂದಿನ ಯುವಜನತೆ ಸ್ವಾತಂತ್ರ್ಯವನ್ನು ಉಳಿಸಿಕೊಂಡು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಕೊಳ್ಳಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಟೀನ ಎಚ್ ಎಸ್, ಉಪನ್ಯಾಸಕರು, ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ ಗಣಪತಿ ನಾಯ್ಕ್, ಮಿಥನ್ ಮತ್ತು ಉಪನ್ಯಾಸಕೇತರರು ಭಾಗವಹಿಸಿದರು.







