ಪಂಜ :ಸಂಪ್ರೀತಿ ರಿಕ್ಷಾ ನಿಲ್ದಾಣದಲ್ಲಿ ಸ್ವಾತಂತ್ರ್ಯೋತ್ಸವ

0

ಬಿಎಂಎಸ್ ಆಟೋ ಚಾಲಕರ ಸಂಘ ಪಂಜ ಘಟಕ ಸುಳ್ಯ ತಾಲೂಕು( ರಿ) ಹಾಗೂ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಪಂಜ(ರಿ) ಇದರ ಜಂಟಿ ಆಶ್ರಯದಲ್ಲಿ ಇಂದು ಪಂಜ ಸಂಪ್ರೀತಿ ರಿಕ್ಷಾ ನಿಲ್ದಾಣದಲ್ಲಿ 80ನೇ ವರ್ಷದ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು.

ನಿವೃತ್ತ ಮಾಜಿ ಸೈನಿಕರಾದ
ಲಕ್ಷ್ಮಣ ಗೌಡ ಬೇರ್ಯ ಧ್ವಜಾರೋಹಣ ಮಾಡಿದರು ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ನಾಗೇಶ್ ಕುಳ್ಳಾಜೆ ವಹಿಸಿಕೊಂಡರು ಗೌರವ ಉಪಸ್ಥಿತಿಯಲ್ಲಿ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಹಿತೇಶ್ ಪಂಜದ ಬೈಲು ಉಪಸ್ಥಿತರಿದ್ದರು. ದಾಮೋದರ ನೇರಳ ನಿರೂಪಿಸಿದರು ಸಂಘದ ಕಾರ್ಯದರ್ಶಿಯಾದ ನಳಿನಿ ಮಂಚಿಕಟ್ಟೆ ವಂದಿಸಿದರು. ಸಂಘದ ವತಿಯಿಂದ ಐಡಿ ಕಾರ್ಡ್ ಮಾಡಲಾಗಿತ್ತು ಇದನ್ನು ಈ ಕಾರ್ಯಕ್ರಮದಲ್ಲಿ ಲಕ್ಷ್ಮಣ ಗೌಡ ಬೇರ್ಯ ನಿವೃತ್ತ ಮಾಜಿ ಸೈನಿಕ ಇವರು ಬಿಡುಗಡೆಗೊಳಿಸಿದರು.

ಕಾಮಧೇನು ಕೋಲ್ಡ್ ಹೌಸ್ ಮಾಲಕರಾದ ನಾಗೇಶ್ ಇವರು ಸಿಹಿ ತಿಂಡಿಯನ್ನು ಹಂಚಿದರು.
ಹಾಗೂ ಸಂಘದ ವತಿಯಿಂದ ಪಂಜ ಶಾಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.