ಅಜ್ಜಾವರ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ತಖ್ವಿಯ್ಯತುಲ್ ಇಸ್ಲಾಂ ಜಮಾಯತ್ ಕಮಿಟಿ ಅಜ್ಜಾವರ- ಮೇನಾಲ ಹಾಗೂ ನೂರುಲ್ ಇಸ್ಲಾಂ ಮದ್ರಸ ಅಜ್ಜಾವರ ಇದರ ಆಶ್ರಯದಲ್ಲಿ 80 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಜಮಾಹತ್ ಅಧ್ಯಕ್ಷರಾದ ಹಾಜಿ ಅಬ್ದುಲ್ಲಾ ಪಳ್ಳಿಕರೆ, ಕಾರ್ಯದರ್ಶಿ ಶೌಕತ್ ಮೇನಾಲ ಕೋಶಾಧಿಕಾರಿ ಹಸೈನಾರ್ ಗುಳುಂಬು, ಮದ್ರಸ ಉಸ್ತುವಾರಿ ಹಾಗೂ ಕಮಿಟಿಯ ಎಲ್ಲಾ ಸದ್ಯಸ್ಯರು ಮದ್ರಸ ಉಸ್ತಾದರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪೋಷಕರು ಭಾಗವಹಿಸಿದರು, ಕಾರ್ಯಕ್ರಮದ ಆರಂಭದಲ್ಲಿ ಮದ್ರಸ ದ ಉಸ್ತಾದರಾದ ಹುಸೈನ್ ದಾರಿಮಿ ಪ್ರಾರ್ಥನೆ ನಿರವೆರಿಸಿದರು, ಜಮಾಹತ್ ಅಧ್ಯಕ್ಷರಾದ ಪಳ್ಳಿಕರೆ ಅಬ್ದುಲ್ ಕುಂಞಿ ಹಾಜಿ , ಹಾಗೂ ಮಾಜಿ ಅಧ್ಯಕ್ಷರು ಅಬ್ದುಲ್ ಖಾದರ್ ಹಾಜಿ ಧ್ವಜಾರೋಹಣ ನೆರವೇರಿಸಿದರು ಮದ್ರಸ ಉಸ್ತಾದರಾದ ಮಹಿಯ್ಯದ್ದೀನ್ ಅನ್ಸಾರಿ ಸ್ವಾತಂತ್ರ್ಯದಿನದ ಸಂದೇಶವನ್ನು ಸಾರಿದರು ರಫೀಕ್ ಮುಸ್ಲಿಯಾರ್ ಕಾರ್ಯಕ್ರಮವನ್ನು ನಿರೂಪಿಸಿದರು.