ರೋಟರಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ 80 ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ

0

ರೋಟರಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ರೋಟರಿ ಕ್ಲಬ್ ಅಧ್ಯಕ್ಷರಾದ ರೊ.ಲತಾಮಧುಸೂದನ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಕ್ಕಳಲ್ಲಿ ರಾಷ್ಟ್ರಪ್ರೇಮ ಜಾಗೃತ ಗೊಳ್ಳಬೇಕು. ದೇಶಕ್ಕಾಗಿ ಮಡಿದ ವೀರರ ತ್ಯಾಗ ಬಲಿದಾನವನ್ನು ನೆನಪಿಸಿ ಕೊಂಡು ,ರಾಷ್ಟ್ರ ಹಿತತ ಕಾಯಕದಲ್ಲಿ ನಾವೂ ಕೈ ಜೋಡಿಸಬೇಕು ಎಂದು ಶುಭ ಹಾರೈಸಿದರು.


ಸಮಾರಂಭದಲ್ಲಿ ಉಪಸ್ಥಿತರಿದ್ದ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೊ.ಪ್ರಭಾಕರನ್ ನಾಯರ್ ಸ್ವಾತಂತ್ರ್ಯ ಕ್ಕೋಸ್ಕರ ನಡೆದ ಸುದೀರ್ಘ ಹೋರಾಟವನ್ನು ನೆನಪಿಸಿ, ಸ್ವಾತಂತ್ರ್ಯದ ಬಳಿಕ ಭಾರತದ ಅಭಿವೃದ್ಧಿಯ ಪಥಗಳನ್ನು ತಿಳಿಸುತ್ತ, ನಮ್ಮ ದೇಶ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ಭಾರತೀಯನೂ ಕೈಜೋಡಿಸಬೇಕೆಂದು ಈ ದಿನದ ಸಂದೇಶವನ್ನು ನೀಡಿದರು.

ವಿದ್ಯಾಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ರೊ.ರಾಮಚಂದ್ರ. ಪಿ. ಆಡಳಿತ ಮಂಡಳಿಯ ಖಜಾಂಚಿಯವರಾದ ರೊ.ಮಧುಸೂದನ್ ಕುಂಭಕೋಡು, ನಿಕಟ ಪೂರ್ವ ಅಧ್ಯಕ್ಷರಾದ ರೊ.ಡಾ.ರಾಮ್ ಮೋಹನ್, ರೊ.ಆನಂದ ಖಂಡಿಗ, ರೊ.ದಳ ಸುಬ್ರಾಯ ಭಟ್, ರೊ.ಗಣೇಶ್ ಭಟ್. C.A, ರೊ.ಲಿಂಗಪ್ಪ ಗೌಡ, ರೊ.ಹಮೀದ್, ರೊ.ದಯಾನಂದ ಆಳ್ವ, ರೊ.ಡಾl ಶ್ರೀಕೃಷ್ಣ ಭಟ್,ರೊ.ಬಾಪು ಸಾಹೇಬ್, ರೊ.ರಮಾ , ರೊ.ನಳಿನಿ ಕಿರ್ಲಾಯ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೋಭ ಬೊಮ್ಮೆಟ್ಟಿ, ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಜ್ಯೋತ್ಸ್ನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಅನುಷ್ಕಾ ಕೆ.ಆರ್ ಸ್ವಾಗತಿಸಿ,ಫಾತಿಮತ್ ಸನ ವಂದಿಸಿದರು. ವಿದ್ಯಾರ್ಥಿ ನಾಯಕಿ ಕು.ರಿಧಾ ಫಾತಿಮ ಕಾರ್ಯಕ್ರಮ ನಿರೂಪಿಸಿದರು.