ದೇಶದ ಬೆಳವಣಿಗೆಗೆ ಯುವಜನರ ಕೊಡುಗೆ ಅಗತ್ಯ : ಡಾ.ದಾಮ್ಲೆ
















“ದೇಶಕ್ಕೆ ಈ ದಿನ ಬಹಳ ಅಪೂರ್ವವಾದದ್ದು. ಅನೇಕ ವರ್ಷಗಳ ಕಾಲ ಪರಕೀಯರ ಆಳ್ವಿಕೆಯಲ್ಲಿದ್ದು ನರಳಿದಂತಹ ಜನತೆ ಸ್ವಾತಂತ್ರ್ಯ ಭಾರತದ ಬೆಳಕನ್ನು ಕಂಡಂತಹ ದಿನ. ಸ್ವಾತಂತ್ರ್ಯವನ್ನು ಪಡೆದ ನಂತರ ಭಾರತ ಶಿಕ್ಷಣ, ಯಂತ್ರ, ವಿಜ್ಞಾನ, ಡಿಜಿಟಲ್ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರಗತಿ ಹೊಂದಿದೆ. ನಮ್ಮನ್ನು ಇಡಿ ವಿಶ್ವವೇ ತಿರುಗಿ ನೋಡುವ ಮಟ್ಟದಲ್ಲಿ ಭಾರತವು ಬೆಳೆದು ನಿಂತಿದೆ. ದೇಶದ ಪರಿಕಲ್ಪನೆ ಹೃದಯದಲ್ಲಿ ಇದ್ದಾಗ ಮಾತ್ರ ದೇಶದ ಶಕ್ತಿ ಹೆಚ್ಚಾಗಲು ಸಾಧ್ಯ. ಒಬ್ಬರ ಬೆಳವಣಿಗೆಯು ಅನೇಕರ ಬೆಳವಣಿಗೆಗೆ ಪೂರಕವಾಗಿರುವಂತೆ ಇರಬೇಕು. ಯುವಕರೆಲ್ಲ ಪ್ರಯತ್ನಶೀಲರಾಗಿ ನಿಮ್ಮ ಸಾಮರ್ಥ್ಯಗಳನ್ನು ಸರಿಯಾದ ಮಾರ್ಗದರ್ಶನದೊಂದಿಗೆ ಬೆಳೆಸಿಕೊಳ್ಳಿ” ಎಂದು ಸ್ನೇಹ ಶಿಕ್ಷಣ ಸಂಸ್ಧೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ಅವರು ಹೇಳಿದರು.
ಅವರು ಆ.15 ರಂದು ಸ್ನೇಹ ಶಿಕ್ಷಣ ಸಂಸ್ಧೆಯಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಗೈದು ಮಾತನಾಡಿದರು.
ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಸಂಚಾಲಕರಾದ ಡಾl ವಿದ್ಯಾ ಶಾಂಭವ ಪಾರೆ, ಮುಖ್ಯೋಪಾಧ್ಯಾಯರುಗಳಾದ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ, ದೇವಿಪ್ರಸಾದ ಜಿ. ಸಿ,ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು. ಮುಖ್ಯೋಪಾಧ್ಯಾಯರಾದ ದೇವಿಪ್ರಸಾದ ಜಿ.ಸಿ ಸ್ವಾಗತಿಸಿ, ಸವಿತಾ ಎಂ ಧನ್ಯವಾದಗೈದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು. ಬಳಿಕ ಪೋಷಕರ ಸಭೆ ನಡೆಯಿತು.







