ಬೆಳ್ಳಾರೆ ಜ್ಞಾನದೀಪದಲ್ಲಿ ಆಟಿದ ಪೊಲಬು ಕಾರ್ಯಕ್ರಮ

0

ಆಟಿ ಆಚರಣೆಯಲ್ಲಿದೆ ತುಳುವರ ಬದುಕಿನ ಸಾರ : ಕೇಪು ಅಜಿಲ

ಆಟಿ ಕೇವಲ ಆಚರಣೆಯಲ್ಲ,ತುಳುನಾಡಿನ ಆಟಿಯಲ್ಲಿ ತುಳುವರ ಜೀವನದ ಭಾಗವೇ ಅಡಗಿದೆ ಎಂದು ಜಾನಪದ ವಿದ್ವಾoಸ, ಹಿರಿಯ ದೈವ ನರ್ತಕ ಕೇಪು ಅಜಿಲ ಹೇಳಿದರು.

ಅವರು ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಇಂಟರ್ಯಾಕ್ಟ್ ಕ್ಲಬ್ ಜ್ಞಾನದೀಪ ಬೆಳ್ಳಾರೆ ಮತ್ತು ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆದ ಆಟಿದ ಪೊಲಬು ಕಾರ್ಯಕ್ರಮವನ್ನು ಉದ್ಘಾಟಿಸಿ, ಆಟಿಯ ಮಹತ್ವದ ಬಗ್ಗೆ ಮಾತನಾಡಿದರು.

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ಅರೀಫ್ ಬೆಳ್ಳಾರೆ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ವಸಂತ ಗೌಡ ಪಡ್ಪು, ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ರೋಶನ್ ಫೆರ್ನಾಂಡಿಸ್, ಬೆಳ್ಳಾರೆ ಟೌನ್ ರೋಟರಿ ಕ್ಲಬ್ ನ ಇಂಟರ್ಯಾಕ್ಟ್ ಚಯರ್ ಮೆನ್ ಪ್ರಮೋದ್ ಕುಮಾರ್ ಶೆಟ್ಟಿ, ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಉಪಸ್ಥಿತರಿದ್ದರು.

ವಿದ್ಯಾರ್ಥಿ ಶಿಕ್ಷಕಿ ಯಶಕಲಾ ಸ್ವಾಗತಿಸಿದರು. ವೇದಾವತಿ ವಂದಿಸಿದರು. ಭವ್ಯಾ ಕಾರ್ಯಕ್ರಮ ನಿರ್ವಹಿಸಿದರು. ರಂಜಿನಿ ಸಹಕರಿಸಿದರು. ಸಂಸ್ಥೆಯ ವಿದ್ಯಾರ್ಥಿಗಳು ತಯಾರಿಸಿದ ಆಟಿಯ ತಿಂಡಿ ತಿನಿಸುಗಳ ಪ್ರದರ್ಶನ ನಡೆಯಿತು. ಆಟಿ ತಿಂಗಳ 52 ಬಗೆಯ ವಿವಿಧ ಖಾದ್ಯಗಳನ್ನು ಸಂಸ್ಥೆಯ ವಿದ್ಯಾರ್ಥಿ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಣ ಬಡಿಸಿದರು.