ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಜಾಲ್ಸೂರು ‌ಗ್ರಾಮದ ವಿನೋಬಾನಗರ ವಿವೇಕಾನಂದ ವಿದ್ಯಾ ಸಂಸ್ಥೆಗಳು ಇಲ್ಲಿ 80 ನೇ ವರ್ಷದ ಸ್ವಾತಂತ್ರೋತ್ಸವನ್ನು ಆಚರಿಸಲಾಯಿತು.

ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ನ. ಸೀತಾರಾಮ್ ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಭಾಷೆಯಲ್ಲಿ ಸ್ವಾತಂತ್ರೋತ್ಸವಕ್ಕೆ ಹೋರಾಡಿದ ಮಹಾನ್ ಪುರುಷರ ಬಗ್ಗೆ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಕೋಶಾಧಿಕಾರಿ ಸುಧಾಕರ್ ಕಾಮತ್, ಸಂಚಾಲಕರಾದ ಡಾ. ಗೋಪಾಲ ಕೃಷ್ಣ ಭಟ್ ಕಾಟೂರು, ಸದಸ್ಯರಾದ ಹೇಮಂತ್ ಕಾಮತ್ ಅರಂಬೂರು , ಅಡ್ಕಾರು ಶ್ರೀ ಸುಬ್ರಮಣ್ಯ ದೇವಸ್ಥಾನ ದ ಆಡಳಿತ ಮೋಕ್ತೆಸರರು ಆದ ಗುರುರಾಜ್ ಭಟ್, ಪ್ರಾಥಮಿಕ ವಿಭಾಗದ ಶಾಲಾಭಿವೃದ್ಧಿ ಸಮೀತಿಯ ಅಧ್ಯಕ್ಷರಾದ ರವಿರಾಜ್ ಗಬ್ಬಳಡ್ಕ , ಉಪಾಧ್ಯಕ್ಷರಾದ ಮಣಿಕಂಠ ಹಾಸ್ಪರೆ,ಸದಸ್ಯರಾದ ಶ್ರೀ ಮತಿ ಶಶಿಕಲಾ ಶಾಂತಿನಗರ, ಪ್ರೌಢ ವಿಭಾಗದ ಶಿಕ್ಷಕ – ರಕ್ಷಕ ಸಂಘ ದ ಅಧ್ಯಕ್ಷರಾದ ಶ್ರೀಮತಿ ಶುಭ ಕಾಟೂರು, ರಾಷ್ಟ್ರೋತ್ಥಾನ ಶಿಶುಮಂದಿರದ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಸ್ವರ್ಣಗೌರಿ, ಮನಸುಮ ವಿದ್ಯಾರ್ಥಿ ನಿಲಯದ ಸಹ ವ್ಯವಸ್ಥಾಪಕಿ ಶ್ರೀಮತಿ ವೀರಮ್ಮ ಹಾಗೂ ಪೋಷಕ ವೃಂದದವರು ಉಪಸ್ಥಿತರಿದ್ದರು.