














ಐವರ್ನಾಡು ಮುಹಿಯುದ್ದೀನ್ ಜುಮಾ ಮಸ್ಜಿದ್ ನಲ್ಲಿ 80ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಜಮಾಅತ್ ಅಧ್ಯಕ್ಷರಾದ ಶರೀಫ್ ನಿಡುಬೆ ಯವರು ಧ್ವಜಾರೋಹಣವನ್ನು ನೆರವೇರಿಸಿದರು. ಮದ್ರಸಾ ಮಕ್ಕಳು ಪೋಷಕರು ರಾಷ್ಟ್ರಗೀತೆ ಹಾಡಿದರು. ನಂತರ ಮದರಸಾ ಹಾಲಿನಲ್ಲಿ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು. ಸಭಾಧ್ಯಕ್ಷತೆಯನ್ನು ಶರೀಫ್ ನಿಡುಬೆ ವಹಿಸಿದ್ದು ಖತೀಬ್ ಉಸ್ತಾದರಾದ ಅಬ್ದುಲ್ ಖಾದರ್ ಫೈಜಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯದರ್ಶಿ ಅಬೂಬಕ್ಕರ್ ಪರ್ಲಿಕಜೆಯವರು ಸ್ವಾಗತಿಸಿದರು. ಜಮಾಅತರಾದ ಅಬೂಸ್ವಾಲಿಹ್ ಕರುಂಬಿಲ ಸಭೆಯನ್ನುದ್ದೇಶಿಸಿ ಮಾತನಾಡಿದರು. ಎಲ್ಲಾ ಜಮಾಅತರು ಪೋಷಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಪ್ರಾರ್ಥನೆಯ ಬಳಿಕ ಸಿಹಿ ತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.







