ಕಲ್ಲುಗುಂಡಿ ಸ್ಪಾಟ್ ಕಂಪ್ಯೂಟರ್‍ಸ್, ಗ್ರಾಮಒನ್ ಮತ್ತು ಕೆನರಾ ಬ್ಯಾಂಕ್ ವತಿಯಿಂದ 80 ನೇ ಸ್ವಾತಂತ್ರ್ಯೋತ್ಸವ ಆಚರಣೆ

0

ಸ್ಪಾಟ್ ಕಂಪ್ಯೂಟರ್, ಸಂಪಾಜೆ ಗ್ರಾಮ್ ಒನ್ ಮತ್ತು ಕೆನರಾಬ್ಯಾಂಕ್ ಇವರ ಜಂಟಿ ಆಶ್ರಯದಲ್ಲಿ ೮೦ನೇ ಸ್ವಾತಂತ್ರ್ಯೋತ್ಸವನ್ನು ಕಲ್ಲುಗುಂಡಿ ಚರ್ಚ್ ಕಾಂಪ್ಲೆಕ್ಸ್‌ನ ಎದುರು ಆಚರಿಸಲಾಯಿತು. ಹಿರಿಯ ವರ್ತಕರಾದ ಇಬ್ರಾಹಿಂ ಜಿ ಎಂ, ಮಾಲಕರು ಮೆಟ್ರೋ ಫರ್ನಿಚರ್, ಇವರು ಧ್ವಜಾರೋಹಣವನ್ನು ನೆರವೇರಿಸಿದರು. ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ರಮಾದೇವಿ ಕಳಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿಗ್ರಾಮ ಒನ್ ಸಂಪಾಜೆ ಮತ್ತು ಸ್ಪಾಟ್ ಕಂಪ್ಯೂಟರ್‌ನ ಮ್ಹಾಲಕರಾದ ಲ. ಕಿಶೋರ್ ಕುಮಾರ್‌ರವರು ಪ್ರಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಕೆನರಾ ಬ್ಯಾಂಕಿನ ಸಿಬ್ಬಂದಿ ಶ್ರೀಮತಿ ಶ್ರೀಜಾ, ಕಲ್ಲುಗುಂಡಿ ಸನ್‌ಲೈಪ್ ವೆಲ್‌ನೆಸ್ ಕೇಂದ್ರದ ನಿರ್ದೇಶಕರಾದ ಪವನ್ ಮತ್ತು ಶ್ರೀಮತಿ ರಚನಾ, ಶ್ರೀ ಕಟೀಲು ಯಕ್ಷಗಾನ ಸಂಘ ಕಲ್ಲುಗುಂಡಿ ಇದರ ಅಧ್ಯಕ್ಷರಾದ ಈಶ್ವರ ಆಚಾರ್ಯ, ಸ್ಥಳೀಯ ರಿಕ್ಷಾ ಚಾಲಕರು ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಗ್ರಾಮ ಒನ್ ಪ್ರಾಂಚೈಸಿ ಶ್ರೀಮತಿ ಧರ್ಮಾವತಿ ಕಿಶೋರ್, ಸಿ.ಕೆ ಕಲೆಕ್ಷನ್ ನ ಮಾಲಕರಾದ ಶ್ರೀಮತಿ ಲೀಲಾವತಿ ಕಲಾಯಿ ಹಾಗು ಕು.ಸಿಂಚನ ನಡೆಸಿಕೊಟ್ಟರು.
ಚಿತ್ರ : ಸ್ಟುಡೀಯೋ ಪಾಂಟ್, ಕಲ್ಲುಗುಂಡಿ