ಆ. 20ರಂದು ಜಿಲ್ಲಾಧಿಕಾರಿಗಳು ಸುಳ್ಯಕ್ಕೆ

0

ಎಸ್ಸಿ-ಎಸ್ಟಿ‌ ಕುಂದು ಕೊರತೆ ಸಭೆಯಲ್ಲಿ‌ ಭಾಗಿ

ಸುಳ್ಯ ತಾಲೂಕು ಮಟ್ಟದ ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡದ ಕುಂದು – ಕೊರತೆ ವಿಶೇಷ ಸಭೆಯು ಜಿಲ್ಲಾಧಿಕಾರಿ ಹೆಚ್.ವಿ. ದರ್ಶನ್ ರವರ ಅಧ್ಯಕ್ಷತೆಯಲ್ಲಿ ಆ.20ರಂದು ಅಪರಾಹ್ನ 3 ಗಂಟೆಗೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.

ಈ ಸಭೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರುಗಳು ಹಾಗೂ ಇಲಾಖೆಯ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಹವಾಲುಗಳನ್ನು ಮುಂಚಿತವಾಗಿ ತಹಶೀಲ್ದಾರ್ ಕಚೇರಿಯಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.