ಮಂಗಳೂರಿನ ಬಾವುಟಗುಡ್ಡೆಯಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯ ಮುಂಭಾಗದಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ

0

ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯ ಮುಂಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನಾ ಸಮಿತಿ (ರಿ) ಮಂಗಳೂರು ಮತ್ತು ತುಳುನಾಡ ರಕ್ಷಣಾ ವೇದಿಕೆಯ ಸಹಯೋಗದೊಂದಿಗೆ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಚಾರ್ಟೆಡ್ ಅಕೌಂಟೆಟ್ ವೆಂಕಟ್ರಮಣ ಮಲ್ಲಾರ ಧ್ವಜಾರೋಹಣವನ್ನು ನೆರೆವೇರಿಸಿದರು. ಮುಖ್ಯ ಅಥಿತಿಗಳಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, 1837 ರ ಇತಿಹಾಸದ ಬಗ್ಗೆ ಹಾಗೂ ರಾಮಯ್ಯ ಗೌಡರ ತ್ಯಾಗ ಬಲಿದಾನಗಳನ್ನು ತಿಳಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನಾ ಸಮಿತಿಯ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಮಾತನಾಡಿ ” 1837 ರಲ್ಲಿ ದೊಡ್ಡ ಸ್ವಾತಂತ್ರ್ಯ ಹೋರಾಟವಾದ ಸ್ಥಳವನ್ನು ನೋಡಲು ಕಲ್ಕತ್ತಾದಿಂದ ಬಂದಂತಹ ರವೀಂದ್ರನಾಥ ಠಾಗೂರರ ಹೆಸರು ಠಾಗೂರ್ ಪಾರ್ಕ್ ಎಂದು ಶಾಶ್ವತವಾಯಿತು ಆದರೆ ಅದೇ ಹೋರಾಟದಲ್ಲಿ ಮಡಿದು ತನ್ನ ಕುಟುಂಬ ಆಸ್ತಿ ಅಸ್ತಿತ್ವವನ್ನೆ ಕಳೆದುಕೊಂಡು ಸ್ವಾತಂತ್ರ್ಯಕ್ಕಾಗಿ ಈ ನಾಡಿಗೆ ಪ್ರಾಣ ಅರ್ಪಿಸಿದ ವೀರನ ಹೆಸರು ಈ ಮಣ್ಣಿನಲ್ಲಿ ಮಣ್ಣಾಯಿತು. ಅದನ್ನು ಉಳಿಸುವಂತಹ ಕಾರ್ಯ ನಮ್ಮಿಂದೆಲ್ಲ ಆಗಬೇಕಿದೆ. ಇದಕ್ಕಾಗಿ ಶಾಸಕ ಮಂಜುನಾಥ ಭಂಡಾರಿಯವರು ಬೃಹತ್ ಎತ್ತರದ ಧ್ವಜ ಸ್ಥಂಭ ಉಬ್ಬು ಚಿತ್ರಗಳಂತಹ ನಮ್ಮ ಎಲ್ಲಾ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡಲು ಸರಕಾರದಿಂದ ಬೇಕಾಗುವ ಎಲ್ಲಾ ಸಹಕಾರಗಳನ್ನು ನೀಡುವ ಭರವಸೆಯನ್ನು ಕೊಟ್ಟಿದ್ದಾರೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಯೋಗೀಶ್ ಶೆಟ್ಟಿ ಜೆಪ್ಪು, ಒಕ್ಕಲಿಗ ಸಂಘದ ಉಪಾಧ್ಯಕ್ಷ ಆನಂದ್ ಪಿ.ಹೆಚ್, ಕಾರ್ಯದರ್ಶಿ ನವೀನ್ ಚಂದ್ರ ಭೋಜಾರ, ಖಜಾಂಜಿ ಶ್ರೀಮತಿ ಜಯಶ್ರೀ ಪರ್ಲ, ಒಕ್ಕಲಿಗ ಸಂಘ ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಸಾರಿಕಾ ಸುರೇಶ್, ಕಾರ್ಯದರ್ಶಿ ಶ್ರೀಮತಿ ಸುನಂದ ದಂಬೆಕೋಡಿ, ಒಕ್ಕಲಿಗ ಸಂಘ ಯುವ ಘಟಕದ ಕಾರ್ಯದರ್ಶಿ ಚೇತನ್ ಕೊಕ್ಕಡ, ಒಕ್ಕಲಿಗ ಸಂಘದ ನಿರ್ದೇಶಕರುಗಳಾದ ಶ್ರೀಮತಿ ಕಲಾವತಿ, ಕೃಷ್ಣಪ್ಪ ಗೌಡ ಪಡ್ಡಂಬೈಲ್, ಶ್ರೀಮತಿ ಸೌಮ್ಯ ಸುರೇಶ್, ನಾಗೇಶ್ ಕೆ ಗೌಡ ಪುತ್ತೂರು, ಶ್ರೀಮತಿ ಅನಿತಾ ಶಿವಕುಮಾರ್, ಕಿರಣ್ ಕೊಡಂಗೆ, ಸುಂದರ ಗೌಡ ಮತ್ತು ಸ್ಮಾರಕ ಸಮಿತಿಯ ಖಜಾಂಜಿ ಶಿವರಾಮ ನಿನ್ನಿಕಲ್ಲು, ಸದಸ್ಯರುಗಳಾದ ಸುರೇಶ್ ಕುಮಾರ್ ಪಣೆಮಜಲು, ಮಹೇಶ್ ನಡುತೋಟ, ಸುನಿಲ್ ಕೆರ್ನಡ್ಕ, ಮಹೇಶ್ ಮೋಂಟಡ್ಕ, ಕಿರಣ್ ಹೊಸಳಿಕೆ, ಬಾಲಕೃಷ್ಣ ಗೌಡ ಬಿ, ಪುರುಷೋತ್ತಮ ದೇವಸ್, ಕೃಷ್ಣಪ್ಪ ಗೌಡ ಸುರತ್ಕಲ್, ಸಾಂತಪ್ಪ ಗೌಡ ಉಳಿಪ್ಪು, ರಾಘವೇಂದ್ರ ಪಿ.ಡಿ,ದಿನೇಂದ್ರ ಉಳುವಾರು, ಮೋಹನ್ ಕಲ್ಮಂಜ, ಸದಾನಂದ ಡಿ ಪಿ, ಮೋನಪ್ಪ ಗೌಡ ಬಂಟ್ವಾಳ, ಅಪ್ಪುಸ್ವಾಮಿ, ವೇಣುಕುಮಾರ್, ವಾಸುದೇವ ಗೌಡ, ಕೀರ್ತನ್ ಕೊಡಪಾಲ, ಶ್ರೀಮತಿ ಜಾನಕಿ ಬಾಲಕೃಷ್ಣ , ಶ್ರೀಮತಿ ಜಯಲಕ್ಷ್ಮಿ ಶಕ್ತಿನಗರ , ಶ್ರೀಮತಿ ಹೇಮಲತಾ ಚಂದ್ರಶೇಕರ್ , ಶ್ರೀಮತಿ ಪ್ರಮಿತಾ ಅಶೋಕ್ , ಶ್ರೀಮತಿ ಮಾನಸ ಹರಿಪ್ರಸಾದ್, ಪದ್ಮ ಮೇರ್ಕಜೆ, ಕೊರಗಪ್ಪ ಗೌಡ ಕಡೋಡಿ, ಲೋಕೇಶ್ ಸುರತ್ಕಲ್, ಪುರಂದರ ಗೌಡ ಭೋಜಾರ, ವಾಸಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಪ್ಲಾಗ್ ಕಮಾಂಡರ್ ಆಗಿ ಬಿಜಿಎಸ್ ಕಾಲೇಜಿನ ಹರ್ಷ ಸಹಕರಿಸಿದರು. ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಪುತ್ತಿಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.