ಆ.26: ಸುಳ್ಯದ ರಥಬೀದಿಯಲ್ಲಿ ಸ್ವಸ್ತಿಕ್ ಕಂಪ್ಯೂಟರ್ಸ್ ರವರ ವಿಸ್ತೃತ ನೂತನ ಲ್ಯಾಪ್‌ಟಾಪ್ ಶೋ ರೂಂ ಶುಭಾರಂಭ

0

ಸುಳ್ಯದ ರಥಬೀದಿಯಲ್ಲಿ ಕಳೆದೆರಡು ದಶಕಗಳಿಂದ ವ್ಯವಹರಿಸುತ್ತಿರುವ ಸ್ವಸ್ತಿಕ್ ಕಂಪ್ಯೂಟರ್ಸ್ ರವರ ವಿಸ್ತೃತ ಲ್ಯಾಪ್ ಟಾಪ್ ಶೋರೂಂ ನ ಉದ್ಘಾಟನೆಯು ಆ.26 ರಂದು ನಡೆಯಲಿರುವುದು.

ನೂತನ ಶೋರೂಂ ನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿಯವರು ಉದ್ಘಾಟಿಸಲಿರುವರು.
ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ ದೀಪ ಪ್ರಜ್ವಲಿಸಲಿರುವರು.

ಅತಿಥಿಗಳಾಗಿನ್ಯಾಯವಾದಿ ಶ್ರೀಕಾಂತ್ ತ್ರಿಕನ್ನಾಡ್, ಸುಳ್ಯ ವರ್ತಕರ ಸಂಘದ ಗೌರವಾಧ್ಯಕ್ಷಪಿ.ಬಿ.ಸುಧಾಕರ ರೈ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಾಫ, ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಕೆ, ಹಿರಿಯ ಉದ್ಯಮಿ ಕೃಷ್ಣ ಕಾಮತ್ ಅರಂಬೂರು ಉಪಸ್ಥಿತರಿರುವರು.

ಶುಭಾರಂಭದ ಪ್ರಯುಕ್ತ ಪ್ರಸಿದ್ಧ ಬ್ರಾಂಡೆಡ್ ಕಂಪನಿಯ ಆಕರ್ಷಕ ಲ್ಯಾಪ್ ಟಾಪ್ ಗಳು ಆಫರ್ ದರದಲ್ಲಿ ಗ್ರಾಹಕರಿಗೆ ನೀಡಲಾಗುವುದು. ಪ್ರತಿ ಖರೀದಿಯ ಮೇಲೆ ಉಚಿತ ಉಡುಗೊರೆಗಳನ್ನು ನೀಡಲಾಗುವುದು ಎಂದು ಮಾಲಕರು ತಿಳಿಸಿದರು.