ಗೂನಡ್ಕ ಬೈಲೆ – ಬಸಲೆ ರಸ್ತೆಗೆ ಅಧಿಕಾರಿಗಳ ಭೇಟಿ, ಬ್ಯಾನರ್ ತೆರವಿಗೆ ಮನವಿ

0

ದ. ಕ ಸಂಪಾಜೆ ಗ್ರಾಮದ 1 ನೇ ವಾರ್ಡಿನ ಗೂನಡ್ಕ -ಬೈಲೆ ರಸ್ತೆ ದುರಸ್ಥಿಯಾಗದ ಬಗ್ಗೆ ರಸ್ತೆ ಫಲನುಭವಿಗಳು ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ ಬೆನ್ನಲ್ಲೇ ಸುಳ್ಯ ಅಧಿಕಾರಿಗಳು ಆ .24 ರಂದು ಭೇಟಿ ನೀಡಿ ಬ್ಯಾನರ್ ತೆಗೆಯುವಂತೆ ಮನವೊಲಿಸಲು ಪ್ರಯತ್ನಿಸಿದ ಘಟನೆ ವರದಿಯಾಗಿದೆ.

ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ರಾಜಣ್ಣ , ಜಿಲ್ಲಾ ಪಂಚಾಯತ್ ಎ.ಇ.ಇ. ಫಯಾಜ್‌ಅಹ್ಮದ್, ಗ್ರಾಮ ಕರಣಿಕ ಮಂಜುನಾಥ್, ಕಾರ್ಯದರ್ಶಿ ತಿರುಮಲೇಶ್ವರ ಭೇಟಿ ನೀಡಿ ರಸ್ತೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುದಾಗಿ ತಿಳಿಸಿದರಲ್ಲದೆ, ಬ್ಯಾನರ್‌ ತೆರವುಗೊಳಿಸಲು ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಆದರೆ ಬ್ಯಾನರ್‌ ತೆರವುಗೊಳಿಸಲು ಗ್ರಾಮಸ್ಥರು ನಿರಾಕರಿಸಿದ್ದು , ಆದಷ್ಟು ಶೀಘ್ರವೇ ರಸ್ತೆಯನ್ನು ದುರಸ್ಥಿಗೊಳಿಸಿದ ಬಳಿಕವೇ ಬ್ಯಾನರನ್ನು ತೆರವುಗೊಳಿಸುತ್ತೇವೆ ಎಂದು ಗ್ರಾಮಸ್ಥರು ಅಧಿಕಾರಿಗಳೊಡನೆ ವಿರೋಧವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.