ಗುತ್ತಿಗಾರು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಸನ್ಮಾನ ಕಾರ್ಯಕ್ರಮ

0

31 ಯೂನಿಟ್ ರಕ್ತ ಸಂಗ್ರಹ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಇದರ ವತಿಯಿಂದ ಗ್ರಾಮ ಪಂಚಾಯತ್ ಗುತ್ತಿಗಾರು, ಅರೋಗ್ಯ ಕೇಂದ್ರ ಗುತ್ತಿಗಾರು, ಜಿಲ್ಲಾ ಮತ್ತು ತಾಲೂಕು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು, ಸುಳ್ಯ.ಅಮರ ಸಂಜೀವಿನಿ ಗ್ರಾಮದ ಮಟ್ಟದ ಒಕ್ಕೂಟ ಗುತ್ತಿಗಾರು, ಲಯನ್ಸ್ ಕ್ಲಬ್ ಹಿರಿಯಡ್ಕ, ಲಯನ್ಸ್ ಕ್ಲಬ್ ಲಯನ್ಸ್ ಕ್ಲಬ್ ಜಲದುರ್ಗ ಬೆಳ್ಳಾರೆ ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್, ಬಿ ಯಂ. ಯಸ್. ಆಟೋ ಚಾಲಕರ ಸಂಘ ಗುತ್ತಿಗಾರು , ಜೆಸಿಐ ಪಂಜ ಪಂಚಶ್ರೀ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮವು ಗ್ರಾ.ಪಂ.ನ ಪ. ವರ್ಗದ ಸಭಾಭವನ ಗುತ್ತಿಗಾರು ಆ.22 ರಂದು ನಡೆಯಿತು. ಈ ಸಂದರ್ಭದಲ್ಲಿ 31 ಮಂದಿ ಮಂದಿ ರಕ್ತದಾನ ಮಾಡುವ ಮೂಲಕ ಉತ್ತಮ ಕಾರ್ಯದಲ್ಲಿ ಪಾಲ್ಗೊಂಡರು.
ಅಮರ ಚಾರಿಟೇಬಲ್ ಉಪಾಧ್ಯಕ್ಷ ಮೋಹನ್ ದಾಸ್ ಶಿರಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಪಂಚಾಯತ್ ಆಡಳಿತ ಅಧಿಕಾರಿ ದೇವರಾಜ್ ಮುತ್ಲಾಜೆ, ನಿವೃತ್ತ ಪ್ರಾಂಶುಪಾಲ ವೆಂಕಪ್ಪ ಗೌಡ ಕೇನಾಜೆ, ಹಿರಿಯಡ್ಕ ಲಯನ್ಸ್ ಅಧ್ಯಕ್ಷ ಜಯಪ್ರಕಾಶ್ ನಾಯಕ್, ಬೆಳ್ಳಾರೆ ಲಯನ್ಸ್ ನ ಪ್ರದೀಪ್ ರೈ ಪಾಂಬಾರು, ಗುತ್ತಿಗಾರು, ಲಯನ್ಸ್ ಅಧ್ಯಕ್ಷ ನವೀನ್, ರೆಡ್ ಕ್ರಾಸ್ ಮುಖ್ಯಸ್ಥ ಶ್ರೀ ಮತಿ ಅಮಿಷ, ಟ್ರಸ್ಟ್ ಉಪಾಧ್ಯಕ್ಷ ಮೋಹನ್ ದಾಸ್ ಶಿರಾಜೆ, ರಮಿತ ಆಚಳ್ಳಿರವರು ಜೊತೆ ಯಾಗಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿದ ಪ್ರತಿಯೊಬ್ಬರನ್ನು ಗೌರವಿಸಲಾಯಿತು.ಸಮಾರೋಪ ಸಮಾರಂಭದಲ್ಲಿ ಜೆಸಿಐ ಪಂಜ ಪಂಚಶ್ರೀ ಅಧ್ಯಕ್ಷ ದೇವಿಪ್ರಸಾದ್ ಚಿಕ್ಮಳಿ, ಗ್ರಾಮ ಪಂಚಾಯತ್ ನಿಕಟ ಪೂರ್ವ ಸದಸ್ಯ ಶ್ರೀಮತಿ ಲತಾ ರವಿಕುಮಾರ್ ಅಜಡ್ಕ. ಶ್ರೀಮತಿ ದಿವ್ಯ ಸುಜನ ಗುಡ್ಡೆಮನೆ, ಅಭಿಲಾಶ ಶಿವಪ್ರಕಾಶ್, ರೆಡ್ ಕ್ರಾಸ್ ಸದಸ್ಯ ನಾಗಬೂಷಣ್, ನಿರಂತ್ ದೇವಸ್ಯ,ಟ್ರಸ್ಟ್ ಕೋಶಾಧಿಕಾರಿ ಸುಕುಮಾರ್ ಕೊಡೊಂಬು, ಮೋಹನ್ ಮುಕ್ಕೂರು, ಪ್ರಶಾಂತ್ ತಂಟೆಪ್ಪಾಡಿ, ಶ್ರೀಕಾಂತ್ ಪೈಕ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. . ಸುಕೇಶ್ ಚಾರ್ಮಾತ ಪ್ರಾರ್ಥನೆ ಸಲ್ಲಿಸಿ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಕಾರ್ಯಕ್ರಮ ನಿರೂಪಣೆ ಮಾಡಿದ್ದರು.