ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ‘ಶ್ರೀ ಲಕ್ಷ್ಮೀನಾರಾಯಣ’ ಅನ್ನಛತ್ರ ಲೋಕಾರ್ಪಣೆ

0

ಕರಿಕಳ, ಎಣ್ಮೂರು-ಐವತ್ತೊಕ್ಲು, ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ’ ಶ್ರೀ ಲಕ್ಷ್ಮೀನಾರಾಯಣ’ ಅನ್ನಛತ್ರ ಲೋಕಾರ್ಪಣೆ ಆ. 26 ರಂದು ನಡೆಯಿತು.

ಗೋಪಾಲಕೃಷ್ಣ ರೈ ಎಣ್ಮೂರು ಗುತ್ತು ರವರು ಉದ್ಘಾಟಿಸಿದರು. ದೇವಳದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಸಲಹೆಗಾರಾದ ಆನಂದ ಗೌಡ ಕಂಬಳ ದೀಪ ಬೆಳಗಿಸಿದರು.
ದೇವಳದ ಆಡಳಿತ ಟ್ರಸ್ಟ್ ಆಧ್ಯಕ್ಷ
ಚಂದ್ರಪ್ರಕಾಶ್ ಕಂಬಳ ಸ್ವಾಗತಿಸಿದರು ಮತ್ತು ವಂದಿಸಿದರು.
ರವೀಶ್ ಆಕ್ರಿಕಟ್ಟೆ, ಷಣ್ಮುಖ ಕೆರೆಯಡ್ಕ, ಕಾರ್ಯಪ್ಪ ಗೌಡ ಆಕ್ರಿಕಟ್ಟೆ, ದಾಮೋದರ ಗೌಡ ಚೆಕ್ಕಡ್ಕ, ಜಗನಾಥ ರೈ ಕುಳಾಯಿತ್ತೋಡಿ, ಈಶ್ವರ್ ನಾಯ್ಕ್ ಚಾಳೆಗುಳಿ,ಭರತ್ ರಾಮತೋಟ, ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ, ನಳಿನಾಕ್ಷಿ ಪಂಜ, ಶೀಲಾವತಿ ತೋಟ, ವೇದಾವತಿ ಕೆರೆಯಡ್ಕ, ನವೀನ್ ಕುಮಾರ್ ಕಂಬಳ, ಶಿವರಾಮ ಕಂರ್ಬು, ಸೀತಾರಾಮ ಅಳ್ಪೆ ಮೇಲ್ಮನೆ, ಸುಧಾಕರ ಕೆರೆಯಡ್ಕ, ಜಿನ್ನಪ್ಪ ಅಳ್ಪೆ ಕೋಟಿಯಡ್ಕ
ಮೊದಲಾದವರು ಉಪಸ್ಥಿತರಿದ್ದರು. ಶ್ರೀ ದೇವಳದಲ್ಲಿ ಪ್ರತಿ ಬುಧವಾರ ಮತ್ತು ಶನಿವಾರ ಮಧ್ಯಾಹ್ನ
ಅನ್ನ ಸಂತರ್ಪಣೆ ನಡೆಯಲಿದೆ.