ಗೊಳಿಯಡ್ಕ – ಮರ್ಕಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಆಯೋಜನೆ
ಸಂಜೆ ವೈಭವದ ಶೋಭಾಯಾತ್ರೆ
















ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಗೋಳಿಯಡ್ಕ ಮರ್ಕಂಜ ಇದರ ವತಿಯಿಂದ 10ನೇ ವರ್ಷದ ಶ್ರೀ ಗಣೇಶೋತ್ಸವ ಆಚರಣೆಯು ಇಂದು ಗೋಳಿಯಡ್ಕ ವಠಾರದಲ್ಲಿ ಅದ್ದೂರಿಯಾಗಿ ನಡೆಯಿತು.
ಪೂರ್ವಾಹ್ನ ಗಣಪತಿ ವಿಗ್ರಹದ ಆಗಮನ, ಗಣಪತಿ ಹೋಮ, ವಿಗ್ರಹ ಪ್ರತಿಷ್ಠಾಪನೆ, ಬೆಳಗ್ಗಿನ ಪೂಜೆ, ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆದು ಬಳಿಕ ವಿದುಷಿ ಇಂದುಮತಿ ನಾಗೇಶ್ ಮಂಗಳೂರು ಇವರ ನಟರಾಜ ನೃತ್ಯನಿಕೇತನ ನಾಟ್ಯ ಶಾಲಾ ಶಿಷ್ಯವೃಂದದವರಿಂದ ನೃತ್ಯ ವೈವಿದ್ಯ ಹಾಗೂ ಊರಿನ ಭಕ್ತರಿಂದ ಮತ್ತು ಮಕ್ಕಳಿಂದ ಕುಣಿತ ಭಜನೆ ನಡೆಯಿತು. ಸಂಜೆ ಶೋಭಾಯಾತ್ರೆ ನಡೆದು ಜಲಸ್ತಂಭನ ನಡೆಯಲಿದೆ.
ಶೋಭಾಯಾತ್ರೆಯಲ್ಲಿ ಕುಣಿತ ಭಜನೆ ಹಾಗೂ ವಿವಿಧ ವೇಷ ಭೂಷಣಗಳು ಗಮನ ಸೆಳೆಯಲಿದೆ.







