













ಆಲೆಟ್ಟಿ ಗ್ರಾಮದ ನಾಗಪಟ್ಟಣ ನಿವಾಸಿ ಕೋಲ್ಚಾರು ಮನೆತನದ ಹಿರಿಯರಾಗಿದ್ದ ನಿವೃತ್ತ ಶಿಕ್ಷಕರಾದ ದಿ.ಸಂಕಪ್ಪ ಗೌಡ (ನಾಗಪಟ್ಟಣ) ರವರ ಧರ್ಮಪತ್ನಿ ಶ್ರೀಮತಿ ಧರ್ಮಾವತಿ ಯವರು ಸೆ.16 ರಂದು ರಾತ್ರಿ ಮಂಗಳೂರಿನ ಕೆ.ಎಂ.ಸಿಆಸ್ಪತ್ರೆಯಲ್ಲಿನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ದಿವೀಶ್ ಕೋಲ್ಚಾರು, ಮಹೇಶ್ ಕೋಲ್ಚಾರು, ನಾಗಪಟ್ಟಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ದಿನೇಶ್ ಕೋಲ್ಚಾರು, ಪುತ್ರಿ ಶ್ರೀಮತಿ ಸೌಮ್ಯ ಪ್ರಸನ್ನ ಹಾಗೂ ಸೊಸೆಯಂದಿರನ್ನು,
ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವನ್ನು ನಾಗಪಟ್ಟಣದ ಸ್ವಗೃಹದಲ್ಲಿ ನಾಳೆ ಹಗಲು ನಡೆಸುವುದಾಗಿ ಮನೆಯವರು ತಿಳಿಸಿದ್ದಾರೆ.







