













ಸುಳ್ಯ ತಾಲೂಕು ಮಲೆನಾಡು ಹಾಗೂ ಗುಡ್ಡಪ್ರದೇಶವಾದುದರಿಂದ ಇಲ್ಲಿ ಪ್ರಮುಖವಾಗಿ ಡೊಮೆಸ್ಟಿಕ್ ವಿಮಾನ ನಿಲ್ದಾಣದ ಅವಶ್ಯಕತೆಯಿದೆ. ಈಗ ವಿಮಾನ ನಿಲ್ದಾಣಕ್ಕೆ ಮೈಸೂರು ಅಥವಾ ಮಂಗಳೂರಿಗೆ ಹೋಗಬೇಕಾಗುತ್ತದೆ. ಮಂಗಳೂರಿಗೆ ಸುಳ್ಯದಿಂದ ಸುಮಾರು ಎರಡೂವರೆ ಗಂಟೆ ಜರ್ನಿ ಮಾಡಬೇಕಾಗುತ್ತದೆ.ಮೈಸೂರಿಗೆ ಹೋಗಲೂ ತುಂಬಾ ಸಮಯಾವಕಾಶ ಬೇಕಾಗುತ್ತದೆ. ಸುಳ್ಯದಲ್ಲಿ ವಿಮಾನ ನಿಲ್ದಾಣವಾದರೆ ಬೆಂಗಳೂರಿಗೆ ಹೋಗಲು ಅರ್ಧ ಗಂಟೆ ಸಾಕಾಗುತ್ತದೆ. ಸುಳ್ಯದಲ್ಲಿ ರಾಷ್ಟ್ರದ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.ಇವರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಬೇಕು. ಕಸ್ತೂರಿರಂಗನ್ ವರದಿ ಕೃಷಿಕರಿಗೆ ಕಂಟಕವಾಗಿದೆ.ಇದನ್ನು ಕೈ ಬಿಡಬೇಕು. ಜಿಲ್ಲೆಯಲ್ಲಿ ಪ್ರವಾದೋದ್ಯಮ ಕೇಂದ್ರಗಳು ಇರುವ ಹಾಗೆ ಸುಳ್ಯವನ್ನು ಪ್ರವಾಸೋದ್ಯಮ ಕೇಂದ್ರವಾಗಿಸಬೇಕು. ಇಲ್ಲಿ ಪಯಸ್ವಿನಿ ನದಿಯ ಸಂಪತ್ತನ್ನು ಬಳಸಿಕೊಂಡು ಪ್ರವಾಸೋದ್ಯಮ ರೂಪಿಸಬೇಕು. ರಬ್ಬರು ಕೃಷಿಕರು ಹೆಚ್ಚಾಗಿದ್ದು ಟಯರ್ ಫ್ಯಾಕ್ಟರಿ ನಿರ್ಮಾಣ ಮಾಡಬೇಕು.ಇದರಿಂದ ಉದ್ಯೋಗವನ್ನು ಅರಸಿಕೊಂಡು ಬೇರೆ ಊರಿಗೆ ಹೋಗುವವರಿಗೆ ಇಲ್ಲಿಯೇ ಉದ್ಯೋಗವು ದೊರೆಯುವಂತಾಗುತ್ತದೆ.







